AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kempegowda Jayanti: ಮೈಸೂರಿನಲ್ಲಿ ಅದ್ಧೂರಿ ಕೆಂಪೇಗೌಡ ಜಯಂತಿ ಆಚರಣೆ

Kempegowda Jayanti: ಮೈಸೂರಿನಲ್ಲಿ ಅದ್ಧೂರಿ ಕೆಂಪೇಗೌಡ ಜಯಂತಿ ಆಚರಣೆ

ಆಯೇಷಾ ಬಾನು
|

Updated on: Jun 27, 2023 | 1:46 PM

ಇಂದು ಮೈಸೂರು ಜಿಲ್ಲೆಯಲ್ಲಿ ಬೆಂಗಳೂರು ಸೃಷ್ಟಿಕರ್ತ ಕೆಂಪೇಗೌಡರ 514ನೇ ಜಯಂತಿಯನ್ನು ಆಚರಿಸಲಾಗಿದೆ. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ‌ ಅದ್ಧೂರಿ ಮೆರವಣಿಗೆ ಆರಂಭವಾಗಿ ಕಲಾಮಂದಿರದ ಬಳಿ ಮುಗಿಸಲಾಗಿದೆ.

ಮೈಸೂರು: ಪ್ರತಿ ವರ್ಷ ಜೂನ್ 27ರಂದು ನಾಡಪ್ರಭು ಕೆಂಪೇಗೌಡ (KempeGowda) ಅವರ ಜಯಂತಿಯನ್ನು ಆಚರಿಸಲಾಗುತ್ತೆ. ಅದರಂತೆ ಇಂದು ಮೈಸೂರು ಜಿಲ್ಲೆಯಲ್ಲಿ ಬೆಂಗಳೂರು ಸೃಷ್ಟಿಕರ್ತ ಕೆಂಪೇಗೌಡರ 514ನೇ ಜಯಂತಿಯನ್ನು(kempegowda jayanthi 2023) ಆಚರಿಸಲಾಗಿದೆ. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ‌ ಅದ್ಧೂರಿ ಮೆರವಣಿಗೆ ಆರಂಭವಾಗಿ ಕಲಾಮಂದಿರದ ಬಳಿ ಮುಗಿಸಲಾಗಿದೆ. ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್.ಸಿ‌. ಮಹದೇವಪ್ಪ, ಸಂಸದ ಪ್ರತಾಪಸಿಂಹ, ಶಾಸಕರಾದ ಜಿ.ಟಿ. ದೇವೇಗೌಡ, ಪುತ್ರ ಶಾಸಕ ಹರೀಶ್ ಗೌಡ ಸೇರಿ‌ ಹಲವರು ಭಾಗಿಯಾಗಿದ್ದರು.

ನಾಡಪ್ರಭು ಕೆಂಪೇಗೌಡರ ಮೂರ್ತಿ‌ ಮೆರವಣಿಗೆ ನಡೆಯುತ್ತಿದ್ದ ವೇಳೆ ಕಲಾ ತಂಡಗಳು ಜಾನಪದ ಕಲೆ ಪ್ರದರ್ಶಿಸಿದವು. ಡಿಜೆ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಸಂಸದ ಪ್ರತಾಪಸಿಂಹನನ್ನು ಸಚಿವ ಡಾ ಎಚ್.ಸಿ. ಮಹದೇವಪ್ಪ ತಬ್ಬಿಕೊಂಡ ಘಟನೆಯೂ ನಡೆಯಿತು. ಅರಮನೆಯಿಂದ ಪ್ರಮುಖ‌ ರಸ್ತೆಗಳಲ್ಲಿ ಸಾಗಿದ ಮೆರವಣಿಗೆ ಕಲಾಮಂದಿರದ ಬಳಿ ಕೊನೆಯಾಯ್ತು.