ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್; ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
ಗದಗ ನಗರದ ಒಕ್ಕಲಗೇರಿ ಓಣಿಯ ಶತಮಾನೋತ್ಸವದ ಸರ್ಕಾರಿ ಶಾಲೆ ಶಿಥಿಲಾವಸ್ಥೆಯಿಂದಾಗಿ ಮಕ್ಕಳು ಭಯದಲ್ಲೇ ಪಾಠ ಕೇಳುವಂತಾಗಿತ್ತು. ಮಳೆಯಿಂದ ಸೋರುತ್ತಿದ್ದ ಕೊಠಡಿಗಳು ಹಾಗೂ ಹಾರಿಹೋಗುತ್ತಿದ್ದ ಮೇಲ್ಛಾವಣಿ ಸಮಸ್ಯೆಯನ್ನು ಅಕ್ಟೋಬರ್ 3ರಂದು ಟಿವಿ9 ವರದಿ ಮಾಡಿತ್ತು. ಇದರ ಪರಿಣಾಮವಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲೆಗೆ ಹೊಸ ತಗಡಿನ ಮೇಲ್ಛಾವಣಿ ಅಳವಡಿಸಿ, ಮಕ್ಕಳಿಗೆ ಭಯಮುಕ್ತ ಕಲಿಕಾ ವಾತಾವರಣ ಕಲ್ಪಿಸಿದ್ದಾರೆ.
ಗದಗ ನಗರದ ಹೃದಯಭಾಗದಲ್ಲಿರುವ ಒಕ್ಕಲಗೇರಿ ಓಣಿಯ ಶತಮಾನದ ಸಂಭ್ರಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ತೀವ್ರ ಶಿಥಿಲಾವಸ್ಥೆಗೆ ತಲುಪಿ, ಮಕ್ಕಳು ಹಾಗೂ ಶಿಕ್ಷಕರು ಪ್ರತಿದಿನ ಜೀವ ಭಯದಲ್ಲೇ ಪಾಠ ಕೇಳುವಂತಹ ದುಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಟಿವಿ9 ಕನ್ನಡ ಬಿತ್ತರಿಸಿದ ವಿಶೇಷ ವರದಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡಿದ್ದಾರೆ. ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲೆಯ ಅಪಾಯಕಾರಿ ಭಾಗಗಳಿಗೆ ತಕ್ಷಣವೇ ತಗಡಿನ ಶೀಟ್‌ಗಳನ್ನು ಅಳವಡಿಸಿ ಸುರಕ್ಷಿತ ಬಂದೋಬಸ್ತ್ ಮಾಡಿದ್ದಾರೆ. ಅಧಿಕಾರಿಗಳ ಈ ತ್ವರಿತ ಕ್ರಮದಿಂದಾಗಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿದ್ದ ಆತಂಕ ಸಂಪೂರ್ಣವಾಗಿ ದೂರವಾಗಿದೆ. ತಮ್ಮ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಪರಿಹಾರ ದೊರಕಿಸಿಕೊಟ್ಟ ಟಿವಿ9 ಕನ್ನಡ ಚಾನೆಲ್‌ಗೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾವಪೂರ್ಣ ಧನ್ಯವಾದ ಅರ್ಪಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 31, 2026 04:18 PM
Loading...
Unable to load recommendations.
Follow Us
