ಗದಗ: ದಯವಿಟ್ಟು ಭತ್ಯೆ ಕೊಡಿಸಿ ಎಂದು ವೈದ್ಯಕೀಯ ಶಿಕ್ಷಣ ಸಚಿವರ ಕಾಲಿಗೆ ಬಿದ್ದ ಜಿಮ್ಸ್​ ಸಿಬ್ಬಂದಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 27, 2023 | 7:09 PM

ಗದಗಕ್ಕೆ ಬಂದಿದ್ದ ಸಚಿವರ ಬಳಿ, ‘ಕೊವಿಡ್​ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಪ್ರೋತ್ಸಾಹಧನದ ರೂಪದಲ್ಲಿ ಸರ್ಕಾರ ರಿಸ್ಕ್ ಅಲೋಯನ್ಸ್​​ ಘೋಷಿಸಿತ್ತು. ಆದರೆ, ಸರ್ಕಾರದಿಂದ ಹಣ ಮಂಜೂರಾಗಿದ್ರೂ ವೈದ್ಯಾಧಿಕಾರಿಗಳು ಮಾತ್ರ ನೀಡಿಲ್ಲ.

ಗದಗ, ಆ.27: ಇಂದು(ಆ.27) ವೈದ್ಯಕೀಯ ಸಮ್ಮೇಳನದಲ್ಲಿ ಭಾಗಿಯಾಗಲು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ (Sharanprakash Patil)​ ಗದಗಕ್ಕೆ (Gadag) ಬಂದಿದ್ದರು. ಈ ವೇಳೆ ಕೊವಿಡ್​ ವೇಳೆ ಕರ್ತವ್ಯ ನಿರ್ವಹಿಸಿದವರಿಗೆ ಭತ್ಯೆ ನೀಡುವಂತೆ ಜಿಮ್ಸ್​ ಸಿಬ್ಬಂದಿಗಳು ಕಾಲಿಗೆ ಬಿದ್ದು ಮನವಿ ಮಾಡಿಕೊಂಡರು. ಹೌದು, ಗದಗಕ್ಕೆ ಬಂದಿದ್ದ ಸಚಿವರ ಬಳಿ, ‘ಕೊವಿಡ್​ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಪ್ರೋತ್ಸಾಹಧನದ ರೂಪದಲ್ಲಿ ಸರ್ಕಾರ ರಿಸ್ಕ್ ಅಲೋಯನ್ಸ್​​ ಘೋಷಿಸಿತ್ತು. ಆದರೆ, ಸರ್ಕಾರದಿಂದ ಹಣ ಮಂಜೂರಾಗಿದ್ರೂ ವೈದ್ಯಾಧಿಕಾರಿಗಳು ಮಾತ್ರ ನೀಡಿಲ್ಲ. ಗದಗ ಆಸ್ಪತ್ರೆ ವೈದ್ಯಾಧಿಕಾರಿಗಳು ಇನ್ನೂ ರಿಸ್ಕ್ ಅಲೋಯನ್ಸ್​​ ಕೊಟ್ಟಿಲ್ಲ. ಆದ್ದರಿಂದ ಕೊವಿಡ್ ರಿಸ್ಕ್ ಅಲೋಯನ್ಸ್​​ ಕೊಡಿಸಿ ಎಂದು ಡಿ ಗ್ರೂಪ್ ಸಿಬ್ಬಂದಿಯವರು ಮನವಿ ಮಾಡಿಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ