ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಏಳು ಹೆಡೆ ಸರ್ಪದ ಕಾವಲು?
ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ನಂತರ ಬೆಟಗೇರಿಯಲ್ಲೂ ನಿಧಿ ವದಂತಿಗಳು ಹರಡಿವೆ. ಬೆಟಗೇರಿಯ ನಿಗೂಢ ಗವಿಯೊಳಗೆ ನಿಧಿ ಅಡಗಿದೆ ಎಂದು ಗ್ರಾಮಸ್ಥರು ನಂಬಿದ್ದಾರೆ. ಏಳು ಹೆಡೆ ಸರ್ಪ ನಿಧಿಯನ್ನು ಕಾಯುತ್ತಿದ್ದು, ಹೊರಬಂದಾಗ ಸಾಂಬ್ರಾಣಿ ವಾಸನೆ ಬರುತ್ತದೆ ಎನ್ನುತ್ತಾರೆ. ಸ್ಥಳೀಯರ ಪ್ರಕಾರ, ದೊಡ್ಡ ಹಾವುಗಳು ಕಾಣಿಸಿಕೊಳ್ಳುತ್ತವೆ ಹಾಗೂ ಗವಿಯಿಂದ ಶಿವಾನಂದ ಮಠ ಮತ್ತು ಕೆರಂಬನಕಲ್ಲ ದೇವಸ್ಥಾನಕ್ಕೆ ದಾರಿ ಇದೆ ಎಂಬ ಮಾತುಗಳು ಕೇಳಿಬಂದಿವೆ.
ಗದಗ, ಜನವರಿ 27: ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಬಳಿಕ ರಾಜ್ಯದಾದ್ಯಂತ ನಿಧಿ ವದಂತಿಗಳು ವ್ಯಾಪಕವಾಗಿ ಹರಡುತ್ತಿವೆ. ಇದೀಗ ಬೆಟಗೇರಿಯಲ್ಲಿರುವ ನಿಗೂಢ ಗವಿಯೊಂದರಲ್ಲಿ ನಿಧಿ ಅಡಗಿದೆ ಎಂಬ ಮಾತುಗಳು ಹೊಸ ಚರ್ಚೆಗೆ ಕಾರಣವಾಗಿದೆ. ಗ್ರಾಮಸ್ಥರ ಪ್ರಕಾರ, ಈ ನಿಧಿಯನ್ನು ಏಳು ಹೆಡೆಯ ಸರ್ಪವೊಂದು ಕಾಯುತ್ತಿದೆಯಂತೆ. ಹಾವು ಹೊರಬಂದಾಗ ಸಾಂಬ್ರಾಣಿ ವಾಸನೆ ಬರುತ್ತದೆ. ತಮ್ಮ ತಂದೆ ಮತ್ತು ಅಜ್ಜಂದಿರು ಕೂಡ ಇಲ್ಲಿ ನಿಧಿ ಇರುವುದನ್ನು ನೋಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ದೊಡ್ಡ ಗಾತ್ರದ ಹಾವುಗಳು ಇಲ್ಲೇ ಸುತ್ತಾಡಿಕೊಂಡಿರುತ್ತವೆ ಎಂದೂ ತಿಳಿಸಿದ್ದಾರೆ. ಈ ಗವಿಯಿಂದ ಶಿವಾನಂದ ಮಠ ಮತ್ತು ಕೆರಂಬನಕಲ್ಲ ದೇವಸ್ಥಾನಕ್ಕೆ ದಾರಿ ಇದೆ ಎಂಬ ನಂಬಿಕೆಯೂ ಇದೆ. ನಾಗದೇವರ ಕಲ್ಲುಗಳು ಕಾವಲು ಕಾಯುತ್ತಿದ್ದು, ಮೂರು ಹೆಡೆ ಮತ್ತು ಎರಡು ಹೆಡೆಯ ಜೋಡಿ ಹಾವುಗಳು ಇಲ್ಲಿವೆ. ಈ ಹಾವುಗಳು ಇಲ್ಲಿಯವರೆಗೆ ಯಾರಿಗೂ ತೊಂದರೆ ನೀಡಿಲ್ಲ ಎಂಬುದು ಗ್ರಾಮಸ್ಥರ ಮಾತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
