ರಾಜ್ಯಸಭಾ ಚುನಾವಣೆಯಲ್ಲಿ ಜನಾರ್ಧನರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಲಿದ್ದಾರೆ: ಡಿಕೆ ಶಿವಕುಮಾರ್

|

Updated on: Feb 23, 2024 | 2:18 PM

ಶಿವಕುಮಾರ್ ಅವರು ರೆಡ್ಡಿ ತಮ್ಮ ಮನೆಯ ಸದಸ್ಯ ಅಂತ ಹೇಳುತ್ತಿರುವುದು ದೋಸ್ತಿ ಬಹಳಷ್ಟು ಮುಂದಕ್ಕೆ ಸಾಗಿದೆ ಅಂತಲೇ ಅರ್ಥ. ನಗರದ ಖಾಸಗಿ ಹೋಟೆಲೊಂದಲ್ಲಿ ಕಾಂಗ್ರೆಸ್ ಪಕ್ಷ ಇಂದು ಸಾಯಂಕಾಲ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ. ರೆಡ್ಡ್ಡಿಯವರೂ ಇದರಲ್ಲಿ ಭಾಗವಹಿಸವರೇ? ಕುತೂಹಲವಂತೂ ಕೆರಳಿದೆ ಕಾದು ನೋಡಬೇಕು.

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಮ್ಮ ಪಕ್ಷ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಮತ್ತು ವಿರೋಧಪಕ್ಷದವರು ಏನೆಲ್ಲ ಕಸರತ್ತು ನಡೆಸಿದ್ದಾರೆನ್ನುವುದರ ಮೇಲೂ ನಿಗಾ ಇಡಲಾಗಿದೆ ಎಂದು ಹೇಳಿದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಸೇರಿದಂತೆ ನಮ್ಮ 138 ಶಾಸಕರು ಒಂದಾಗಿದ್ದಾರೆ, ನಮ್ಮ ಮನೆಯನ್ನು ಭದ್ರವಾಗಿಟ್ಟುಕೊಳ್ಳುವುದು ಹೇಗೆ ಅಂತ ಗೊತ್ತು ಎಂದು ಶಿವಕುಮಾರ್ ಹೇಳಿದರು. ಅದು ಸರಿ, ಅವರು ಜನಾರ್ಧನ ರೆಡ್ಡಿಯವರನ್ನು ತಮ್ಮ ಮನೆ ಸದಸ್ಯ ಅಂತ ಹೇಳಿದ್ದು ಕನ್ನಡಿಗರಲ್ಲಿ ಆಶ್ಚರ್ಯ ಹುಟ್ಟಿಸಿದರೆ ಉತ್ಪ್ರೇಕ್ಷೆ ಅನಿಸದು. ಇತ್ತೀಚಿಗೆ ರೆಡ್ಡಿಯವರು ಶಿವಕುಮಾರ್ ಅವರನ್ನು ಹೊಗಳಿ ಮಾತಾಡಿದ್ದನ್ನು ಎಲ್ಲರೂ ಕೇಳಿಸಿಕೊಂಡಿದ್ದೇವೆ. ಶಿವಕುಮಾರ್ ಅವರು ರೆಡ್ಡಿ ತಮ್ಮ ಮನೆಯ ಸದಸ್ಯ ಅಂತ ಹೇಳುತ್ತಿರುವುದು ದೋಸ್ತಿ ಬಹಳಷ್ಟು ಮುಂದಕ್ಕೆ ಸಾಗಿದೆ ಅಂತಲೇ ಅರ್ಥ. ನಗರದ ಖಾಸಗಿ ಹೋಟೆಲೊಂದಲ್ಲಿ ಕಾಂಗ್ರೆಸ್ ಪಕ್ಷ ಇಂದು ಸಾಯಂಕಾಲ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ. ರೆಡ್ಡ್ಡಿಯವರೂ ಇದರಲ್ಲಿ ಭಾಗವಹಿಸವರೇ? ಕುತೂಹಲವಂತೂ ಕೆರಳಿದೆ ಕಾದು ನೋಡಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on