‘ದರ್ಶನ್ ರೀತಿ ಅವರ ಫ್ಯಾನ್ಸ್ ಸಹ ಕೆಟ್ಟದಾಗಿ ಮಾತಾಡ್ತಾರೆ’: ಮಹಿಳೆಯರ ಆಕ್ರೋಶ
ನಟ ದರ್ಶನ್ ಅವರಿಗೆ ವಿವಾದಗಳು ಹೊಸದೇನೂ ಅಲ್ಲ. ಈಗ ಮಹಿಳಾ ಒಕ್ಕೂಟದವರು ದರ್ಶನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಹಾಗಾಗಿ ಒಕ್ಕೂಟದ ಮೂಲಕ ದೂರು ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಅವರು ಹೇಳಿಕೆ ನೀಡಿದ್ದಾರೆ.
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ಅವರ ವಿರುದ್ಧ ಅನೇಕ ದೂರುಗಳು ದಾಖಲಾಗುತ್ತಿವೆ. ಈಗ ಮಹಿಳಾ ಸಂಘದವರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮಹಿಳಾ ಒಕ್ಕೂಟದ ಸದಸ್ಯರು ದರ್ಶನ್ ಅಭಿಮಾನಿಗಳ (Darshan Fans) ಮೇಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ದರ್ಶನ್ ಹೀಗೆ ಮಾತನಾಡಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ನಾವು ಹಾಕಿದ್ವಿ. ಅದಕ್ಕೆ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಹೋಗೆ, ಬಾರೆ, ಮುಸುರೆ ತಿಕ್ಕಿಕೊಂಡಿರು ಅಂತೆಲ್ಲ ಹೇಳಿದ್ದಾರೆ. ದರ್ಶನ್ ರೀತಿ ಅವರ ಫ್ಯಾನ್ಸ್ ಕೂಡ ಕೆಟ್ಟದಾಗಿ ಮಾತನಾಡಿದ್ದರಿಂದ ನಮಗೆ ಬೇಸರ ಆಯ್ತು. ಮೀಡಿಯಾ ಮುಂದೆ ಹೇಳೋಕೆ ಆಗದಂತಹ ಕೆಟ್ಟ ರೀತಿಯಲ್ಲಿ ದರ್ಶನ್ ಫ್ಯಾನ್ಸ್ ಉತ್ತರ ನೀಡಿದ್ದಾರೆ. ಅದಕ್ಕಾಗಿ ನಾವು ಮಹಿಳೆಯರ ಒಕ್ಕೂಟದ ಮೂಲಕ ದೂರು ನೀಡಿದ್ದೇನೆ. ದರ್ಶನ್ ವಿರುದ್ಧ ದೂರು ನೀಡಿದರೆ ಎಲ್ಲ ಸರಿ ಆಗುತ್ತದೆ. ದರ್ಶನ್ ಸರಿಯಾಗಿ ಮಾತನಾಡಿದರೆ ಅವರ ಅಭಿಮಾನಿಗಳು ಕೂಡ ತಿದ್ದಿಕೊಳ್ಳುತ್ತಾರೆ’ ಎಂದು ದೂರು ನೀಡಿದ ಮಹಿಳೆಯರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.