BSY in Belagavi: ಬಿಜೆಪಿ ಪುನಃ ಅಧಿಕಾರಕ್ಕೆ ಬರೋದು ಖಚಿತ, ಸಿದ್ರಾಮಯ್ಯನವರೇ ನಿಮ್ಮ ದೊಂಬರಾಟ ಇನ್ನು ನಿಲ್ಲಿಸಿ: ಬಿಎಸ್ ಯಡಿಯೂರಪ್ಪ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 04, 2023 | 2:41 PM

ಬಿಜೆಪಿಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದ ಅವರು ಸಿದ್ದರಾಮಯ್ಯನವರೇ, ಇನ್ಮು ನಿಮ್ಮ ಆಟ ನಡೆಯದು, ನಿಮ್ಮ ರಾಜಕೀಯ ದೊಂಬರಾಟಕ್ಕೆ ಇತಿಶ್ರೀ ಹೇಳಿಬಿಡಿ ಎಂದರು.

ಬೆಳಗಾವಿ: ಬಿಎಸ್ ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಜಿಲ್ಲೆಯ ಬೈಲಹೊಂಗಲ ತಲುಪಿದಾಗ ಭಾರೀ ಜನಸ್ತೋಮ ನೆರೆದಿತ್ತು. ಜನರನ್ನು ಉದ್ದೇಶಿಸಿ ಮಾತಾಡಿದ ಯಡಿಯೂರಪ್ಪನವರು, ಎಲ್ಲರೂ ಬಿಜೆಪಿ ಅಭ್ಯರ್ಥಿಯ ಪರ ಮತ ಚಲಾಯಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುವಂತೆ ಮಾಡಬೇಕೆಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ದೇಶ ಅದ್ಭುತವೆನಿಸುವ ಪ್ರಗತಿ ಸಾಧಿಸುತ್ತಿದೆ. ಅಮಿತ್ ಶಾ (Amit Shah) ಅವರ ರಾಜ್ಯಕ್ಕೆ ಬಂದಾಗಲೂ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದ ಅವರು ಸಿದ್ದರಾಮಯ್ಯನವರೇ, ಇನ್ಮು ನಿಮ್ಮ ಆಟ ನಡೆಯದು, ನಿಮ್ಮ ರಾಜಕೀಯ ದೊಂಬರಾಟಕ್ಕೆ ಇತಿಶ್ರೀ ಹೇಳಿಬಿಡಿ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 04, 2023 02:41 PM