ಗಣೇಶನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದ ನಟ ಶ್ರೀಮುರಳಿ
ಗೌರಿ ಗಣೇಶ ಹಬ್ಬದ ಸಡಗರದಲ್ಲಿ ಚಿತ್ರರಂಗದವರು ಭಾಗಿ ಆಗಿದ್ದಾರೆ. ರೂಪೇಶ್ ಶೆಟ್ಟಿ ನಟನೆಯ ‘ಜೈ’ ಸಿನಿಮಾ ತಂಡ ಕೂಡ ಹಬ್ಬ ಆಚರಣೆ ಮಾಡಿದೆ. ಇಂದು (ಆಗಸ್ಟ್ 27) ಹಬ್ಬದ ಪ್ರಯುಕ್ತ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ನಟ ಶ್ರೀಮುರಳಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದರು. ಈ ವೇಳೆ ಗಣೇಶನಿಗೆ ಅವರು ಪೂಜೆ ಸಲ್ಲಿಸಿದರು.
ಗೌರಿ-ಗಣೇಶ ಹಬ್ಬದ ಸಡಗರದಲ್ಲಿ ಚಿತ್ರರಂಗದವರು ಭಾಗಿ ಆಗಿದ್ದಾರೆ. ರೂಪೇಶ್ ಶೆಟ್ಟಿ ನಟನೆಯ ‘ಜೈ’ ಸಿನಿಮಾ (Jai Movie) ತಂಡ ಕೂಡ ಹಬ್ಬ ಆಚರಣೆ ಮಾಡಿದೆ. ಇಂದು (ಆಗಸ್ಟ್ 27) ಹಬ್ಬದ ಪ್ರಯುಕ್ತ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ನಟ ಶ್ರೀಮುರಳಿ (Sri Murali) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದರು. ಈ ವೇಳೆ ಗಣೇಶನಿಗೆ ಅವರು ಪೂಜೆ ಸಲ್ಲಿಸಿದರು. ‘ಜೈ’ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ ಅವರು ಅದ್ವಿತಿ ಶೆಟ್ಟಿ ಜೋಡಿ ಆಗಿದ್ದಾರೆ. ಕನ್ನಡ ಮತ್ತು ತುಳು ಭಾಷೆಯಲ್ಲಿ ಸಿನಿಮಾ ಮೂಡಿಬರುತ್ತಿದೆ. ಸುನೀಲ್ ಶೆಟ್ಟಿ ಅತಿಥಿ ಪಾತ್ರ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
