ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್ನಲ್ಲಿ ಫುಲ್ ರಶ್
ಗೌರಿ ಗಣೇಶ ಹಬ್ಬದ ಹಿನ್ನಲೆ ಸಾಲು ಸಾಲು ರಜೆ ಇದ್ದು, ತಮ್ಮ ಊರುಗಳಿಗೆ ಜನ ತೆರಳುತ್ತಿದ್ದಾರೆ. ಈ ಹಿನ್ನಲೆ ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದತ್ತ ಆಗಮಿಸುತ್ತಿದ್ದಾರೆ. ಇದರಿಂದ ಮೆಜೆಸ್ಟಿಕ್ ಬಸ್ ನಿಲ್ದಾಣ ಫುಲ್ ರಶ್ ಆಗಿದೆ. ಹಬ್ಬದ ಪ್ರಯುಕ್ತ ಕೆಎಸ್ಆರ್ಟಿಸಿ ಹೆಚ್ಚುವರಿಯಾಗಿ 1500ಕ್ಕೂ ಅಧಿಕ ಬಸ್ಗಳ ವ್ಯವಸ್ಥೆ ಕೂಡ ಮಾಡಲಾಗಿದೆ.
ಬೆಂಗಳೂರು, ಸೆ.06: ಗೌರಿ ಗಣೇಶ ಹಬ್ಬದ ಹಿನ್ನಲೆ ಸಾಲು ಸಾಲು ರಜೆ ಇದ್ದು, ತಮ್ಮ ಊರುಗಳಿಗೆ ಜನ ತೆರಳುತ್ತಿದ್ದಾರೆ. ಈ ಹಿನ್ನಲೆ ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದತ್ತ ಆಗಮಿಸುತ್ತಿದ್ದಾರೆ. ಇದರಿಂದ ಮೆಜೆಸ್ಟಿಕ್ ಬಸ್ ನಿಲ್ದಾಣ ಫುಲ್ ರಶ್ ಆಗಿದೆ. ಹಬ್ಬದ ಪ್ರಯುಕ್ತ ಕೆಎಸ್ಆರ್ಟಿಸಿ ಹೆಚ್ಚುವರಿಯಾಗಿ 1500ಕ್ಕೂ ಅಧಿಕ ಬಸ್ಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ವಿಜಯಪುರ
ಗೋಕರ್ಣ, ಶಿರಸಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹಾಸನ, ಬೆಳಗಾವಿ, ಹೊರನಾಡು, ರಾಯಚೂರು, ಬೀದರ್, ಯಾದಗಿರಿ
ಕಲಬುರಗಿ, ಹೈದರಾಬಾದ್, ವಿಜಯವಾಡ, ತಿರುಪತಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಆದರೂ ಬಸ್ ಕೊರತೆ ಹಿನ್ನೆಲೆ ಬಿಎಂಟಿಸಿ ಬಸ್ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 06, 2024 05:39 PM
Loading...
Unable to load recommendations.
Follow Us