ಗಣೇಶ ಹಬ್ಬ: ಬಸ್​​​ ಟಿಕೆಟ್​ ದರ ಸುಲಿಗೆ ಕಡಿವಾಣಕ್ಕೆ ಮುಂದಾದ ಆರ್​ಟಿಓ, ರಾಜ್ಯಾದ್ಯಂತ ಇಂದು, ನಾಳೆ ಕಾರ್ಯಾಚರಣೆ

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮತ್ತು ಇಲಾಖೆ ಆಯುಕ್ತ ಎ.ಎಂ.ಯೋಗೀಶ್ ಸೂಚನೆ ಮೇರೆಗೆ ಸಾರಿಗೆ ಇಲಾಖೆ ಅಪರ ಆಯುಕ್ತ ಮಲ್ಲಿಕಾರ್ಜುನ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದಿದ್ದು, ಖಾಸಗಿ ಬಸ್​ಗಳ ನಿರ್ವಾಹಕರ ಸುಲಿಗೆಗೆ ಕಡಿವಾಣ ಹಾಕಲು ತಪಾಸಣೆ ಮಾಡಲಾಗುತ್ತಿದೆ. ಹೆಚ್ಚು ಟಿಕೆಟ್ ದರ ವಸೂಲಿ ಮಾಡಿದರೆ ಬ್ಲಾಕ್ ಲಿಸ್ಟ್, ಪರ್ಮಿಟ್ ರದ್ದಿಗೆ ಸೂಚನೆ ನೀಡಲಾಗಿದೆ. ಹಬ್ಬದ ನೆಪದಲ್ಲಿ ಬಸ್​ ಟಿಕೆಟ್​ ದರ ಏರಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. 

ಗಣೇಶ ಹಬ್ಬ: ಬಸ್​​​ ಟಿಕೆಟ್​ ದರ ಸುಲಿಗೆ ಕಡಿವಾಣಕ್ಕೆ ಮುಂದಾದ ಆರ್​ಟಿಓ, ರಾಜ್ಯಾದ್ಯಂತ ಇಂದು, ನಾಳೆ ಕಾರ್ಯಾಚರಣೆ
ಗಣೇಶ ಹಬ್ಬ: ಬಸ್​​​ ಟಿಕೆಟ್​ ದರ ಸುಲಿಗೆ ಕಡಿವಾಣಕ್ಕೆ ಮುಂದಾದ ಆರ್​ಟಿಓ, ರಾಜ್ಯಾದ್ಯಂತ ಇಂದು, ನಾಳೆ ಕಾರ್ಯಾಚರಣೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 06, 2024 | 5:19 PM

ಬೆಂಗಳೂರು, ಸೆಪ್ಟೆಂಬರ್​ 06: ಗೌರಿ-ಗಣೇಶ ಹಬ್ಬ (Ganesh Chaturthi) ಹಿನ್ನೆಲೆ ಜನರು ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಮೆಜೆಸ್ಟಿಕ್​ ಕೆಎಸ್ಆರ್​ಟಿಎಸ್​ ಬಸ್ ನಿಲ್ದಾಣದತ್ತ ಸಾಕಷ್ಟು ಜನರು ಆಗಮಿಸುತ್ತಿದ್ದಾರೆ. ಹಬ್ಬಕ್ಕಾಗಿ ಕೆಎಸ್ಆರ್​ಟಿಎಸ್​  1500 ಹೆಚ್ಚುವರಿ ವಿಶೇಷ ಬಸ್ ನಿಯೋಜನೆ ಮಾಡಿದೆ. ಇನ್ನೊಂದೆಡೆ ಖಾಸಗಿ ಬಸ್​ಗಳು ​​ಟಿಕೆಟ್​ ದರವನ್ನು ಏರಿಕೆ ಮಾಡಿದ್ದಾರೆ. ಹಾಗಾಗಿ ಟಿಕೆಟ್​ ದರ ಸುಲಿಗೆಗೆ ಕಡಿವಾಣ ಹಾಕಲು ಇದೀಗ ಕರ್ನಾಕದಾದ್ಯಂತ ಇಂದು ಮತ್ತು ನಾಳೆ ಆರ್​ಟಿಓ ಕಾರ್ಯಾಚರಣೆಗೆ ಮುಂದಾಗಿದೆ.

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮತ್ತು ಇಲಾಖೆ ಆಯುಕ್ತ ಎ.ಎಂ.ಯೋಗೀಶ್ ಸೂಚನೆ ಮೇರೆಗೆ ಸಾರಿಗೆ ಇಲಾಖೆ ಅಪರ ಆಯುಕ್ತ ಮಲ್ಲಿಕಾರ್ಜುನ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದಿದ್ದು, ಖಾಸಗಿ ಬಸ್​ಗಳ ನಿರ್ವಾಹಕರ ಸುಲಿಗೆಗೆ ಕಡಿವಾಣ ಹಾಕಲು ತಪಾಸಣೆ ಮಾಡಲಾಗುತ್ತಿದೆ. ಹೆಚ್ಚು ಟಿಕೆಟ್ ದರ ವಸೂಲಿ ಮಾಡಿದರೆ ಬ್ಲಾಕ್ ಲಿಸ್ಟ್, ಪರ್ಮಿಟ್ ರದ್ದಿಗೆ ಸೂಚನೆ ನೀಡಲಾಗಿದೆ. ಹಬ್ಬದ ನೆಪದಲ್ಲಿ ಬಸ್​ ಟಿಕೆಟ್​ ದರ ಏರಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಗಣೇಶ ಮೂರ್ತಿ ವಿಸರ್ಜನೆಗೆ 462 ಸಂಚಾರಿ ಟ್ಯಾಂಕರ್, 41 ಕೆರೆಗಳನ್ನು ಗುರುತಿಸಿದ ಬಿಬಿಎಂಪಿ

ಬೆಂಗಳೂರಿನ ಆನಂದರಾವ್ ಸರ್ಕಲ್, ಗೊರಗುಂಟೆಪಾಳ್ಯ, ಹೆಬ್ಬಾಳ, ಕೆ.ಆರ್.ಪುರಂ, ಕೆಂಗೇರಿ, ಹೂಸೂರು ರೋಡ್, ಮಡಿವಾಳ, ಮೆಜೆಸ್ಟಿಕ್ ಸೇರಿ ರಾಜ್ಯಾದ್ಯಂತ ಕಾರ್ಯಾಚರಣೆಗೆ ಆರ್​ಟಿಓ ಮುಂದಾಗಿದ್ದು, ವಿಶೇಷ ತಂಡದಿಂದ ರಾತ್ರಿಪೂರ್ತಿ ಖಾಸಗಿ ಬಸ್​ಗಳ ತಪಾಸಣೆ ನಡೆಸಲಿದೆ.

ಗಣೇಶ ಹಬ್ಬದ ಪ್ರಯುಕ್ತ ಕೆಎಸ್ಆರ್​ಟಿಎಸ್​ ವಿಶೇಷ ಹೆಚ್ಚುವರಿ ಬಸ್​

ಗೌರಿ-ಗಣೇಶ ಹಬ್ಬದ ಸಂಭ್ರಮ ಶುರುವಾಗಿದೆ.  ಹೀಗಾಗಿ ಮೆಜೆಸ್ಟಿಕ್​ ಬಸ್ ನಿಲ್ದಾಣದಿಂದ ಜನರು ಊರಿಗೆ ತೆರಳುತ್ತಿದ್ದಾರೆ. ನಾಳೆ ಗಣೇಶ ಚತುರ್ಥಿ, ಸೆಪ್ಟೆಂಬರ್ 8 ರಂದು ಭಾನುವಾರ ಹಿನ್ನೆಲೆ ತಮ್ಮ ತಮ್ಮ ಊರುಗಳಿಗೆ ಪ್ರಯಾಣಿಕರು ಹೊರಟಿದ್ದಾರೆ. ಈ ನಿಟ್ಟಿನಲ್ಲಿ KSRTC ವಿಶೇಷ ಹೆಚ್ಚುವರಿ ಬಸ್​ ನಿಯೋಜನೆ ಮಾಡಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಹಾಸನ, ರಾಯಚೂರು, ಬೀದರ್, ಯಾದಗಿರಿ, ಹೈದ್ರಾಬಾದ್, ತಿರುಪತಿ, ವಿಜಯವಾಡ, ಕಾರವಾರ, ಕಲಬುರಗಿ ಭಾಗಗಳಿಗೆ ಹೆಚ್ಚುವರಿ ಬಸ್​ ಬಿಡಲಾಗಿದೆ.

ಬಿಎಂಟಿಸಿ ಬಸ್​ಗಳ ಬಳಕೆ 

ಇನ್ನು ಕೆಎಸ್ಆರ್​ಟಿಸಿಯಲ್ಲಿ ಬಸ್​ಗಳ ಕೊರತೆ ಹಿನ್ನಲೆ ಹೊರ ಜಿಲ್ಲೆಯಲ್ಲೂ ಬಿಎಂಟಿಸಿ ಬಸ್​ಗಳು ಕಾರ್ಯಾಚರಣೆ ಮಾಡಲಿವೆ. ಹಬ್ಬಕ್ಕೆ ಹೆಚ್ಚುವರಿ 200 ಬಿಎಂಟಿಸಿ ಬಸ್​ಗಳನ್ನ ಬಳಸಿಕೊಳ್ಳಲು ಕೆಎಸ್ಆರ್ಟಿಸಿ ನಿರ್ಧಾರ ಮಾಡಿದ್ದು, ಕೆಎಸ್ಆರ್ಟಿಸಿ ಅಧಿಕಾರಿಗಳಿಂದ ಬಿಎಂಟಿಸಿಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ತಯಾರಿ, ಖರೀದಿ ಜೋರು; ಹೂ, ಹಣ್ಣು ತುಸು ದುಬಾರಿ

ಬಿಎಂಟಿಸಿ ಬಸ್​ಗಳು ಶಿವಮೊಗ್ಗ, ಧಾರವಾಡ, ತುಮಕೂರು, ಕೋಲಾರ, ಮೈಸೂರಿ ಭಾಗದಲ್ಲಿ ಕಾರ್ಯಾಚರಣೆ ನಡೆಸಲಿವೆ. 200 ಬಸ್​ಗಳು ಕೆಎಸ್ಆರ್ಟಿಸಿ ವ್ಯಾಪ್ತಿಯಲ್ಲಿ ಸಂಚಾರ ಮಾಡಲಿವೆ. ಈಗಾಗಲೇ ಹಬ್ಬಕ್ಕೆ 1500 ಹೆಚ್ಚುವರಿ ಕೆಎಸ್ಆರ್​ಟಿಸಿ ಬಸ್​ಗಳು ಕಾರ್ಯಚರಣೆ ಮಾಡುತ್ತಿದ್ದರೂ ಹೆಚ್ಚುವರಿ ಬಸ್​ಗಳ ಅವಶ್ಯಕತೆಯಿದೆ. ಇನ್ನು ಬೇಡಿಕೆ ಬಂದರೆ ಮತ್ತಷ್ಟು ಬಸ್​ಗಳನ್ನ ನೀಡುವುದಾಗಿ ಬಿಎಂಟಿಸಿ ಸಂಚಾರಿ ವಿಭಾಗದ ಮುಖ್ಯಸ್ಥ ಪ್ರಭಾಕರ ರೆಡ್ಡಿ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.