ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ಆದರೆ ದರ್ಶನ್ಗೆ ಸಿಗಲಿಲ್ಲ ವಿನಾಯಕನ ದರ್ಶನ
Ganesha Festival: ದರ್ಶನ್ ತೂಗುದೀಪ ಇರುವ ಬಳ್ಳಾರಿ ಕೇಂದ್ರ ಜಾರಾಗೃಹದಲ್ಲಿ ಇಂದು ಗಣೇಶ ಹಬ್ಬ ಆಚರಣೆ ಮಾಡಲಾಗಿದೆ. ಆದರೆ ದರ್ಶನ್ಗೆ ಗಣೇಶನ ದರ್ಶನದ ಭಾಗ್ಯ ದೊರೆತಿಲ್ಲ. ಆದರೆ ಪ್ರಸಾದ ಮಾತ್ರ ಸಿಕ್ಕಿದೆ.
ನಟ ದರ್ಶನ್ ಇರುವ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇಂದು ಗಣೇಶ ಚತುರ್ಥಿ ಆಚರಣೆ ಮಾಡಲಾಗಿದೆ. ಜೈಲು ಸಿಬ್ಬಂದಿ ಇಂದು (ಸೆಪ್ಟೆಂಬರ್ 07) ಬೆಳಿಗ್ಗೆ ಟ್ರ್ಯಾಕ್ಟರ್ನಲ್ಲಿ ಗಣೇಶನನ್ನು ತೆಗೆದುಕೊಂಡು ಕಾರಾಗೃಹದ ಆವರಣಕ್ಕೆ ಬಂದರು. ಬರುವಾಗ ಗಣಪತಿಗೆ ಜಯಕಾರಗಳನ್ನು ಹಾಕುತ್ತಾ ಒಳಗೆ ಕರೆತಂದರು. ಹಬ್ಬದ ಪ್ರಯುಕ್ತ ವಿಶೇಷ ಪೂಜೆಗಳನ್ನು ಸಹ ಕಾರಾಗೃಹದ ಸಿಬ್ಬಂದಿ ಮಾಡಿದರು. ಜೈಲು ಕೈದಿಗಳಿಗೂ ಸಹ ಹಬ್ಬದ ಪ್ರಯುಕ್ತ ಇಂದು ವಿಶೇಷ ಊಟದ ವ್ಯವಸ್ಥೆ ಮಾಡಿಸಲಾಗಿತ್ತು. ಆದರೆ ಹೈ ಸೆಕ್ಯುರಿಟಿ ಸೆಲ್ನಲ್ಲಿರುವ ದರ್ಶನ್ಗೆ ಗಣೇಶನ ದರ್ಶನಕ್ಕೆ ಅವಕಾಶ ಕೊಡಲಾಗಿಲ್ಲ. ಮೇಲಧಿಕಾರಿಗಳ ಅನುಮತಿ ಇದ್ದರಷ್ಟೆ ದರ್ಶನಕ್ಕೆ ಅವಕಾಶ ಎಂದು ಹೇಳಿ ಗಣೇಶನ ದರ್ಶನವನ್ನು ನಿರಾಕರಿಸಿದ್ದಾರೆ. ದರ್ಶನ್ ಜೊತೆಗೆ ಹೈ ಸೆಕ್ಯುರಿಟಿ ಸೆಲ್ನಲ್ಲಿರುವ ಇತರೆ ನಾಲ್ಕು ಜನರಿಗೂ ಗಣೇಶನ ದರ್ಶನವನ್ನು ನಿರಾಕರಿಸಲಾಗಿದೆ. ಆದರೆ ಪ್ರಸಾದವನ್ನು ದರ್ಶನ್ಗೆ ತಲುಪಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ