Ganesh Chaturthi 2022: ಬೆಳಗಾವಿಯಲ್ಲಿ ವಿನಾಯಕನ ಅದ್ಧೂರಿ ವಿಸರ್ಜನೆಗೆ ನೆರೆದ ಜನಸ್ತೋಮ
ಈ ಸಲ ಬರೋಬ್ಬರಿ 24 ಗಂಟೆಗಳ ಕಾಲ ಮೆರವಣಿಗೆ ನಡೆದಿದೆ. ನಿನ್ನೆ ಸಂಜೆ ಗಣೇಶ ವಿಸರ್ಜನೆಗೆ ಚಾಲನೆ ನೀಡಲಾಗಿತ್ತು. ಗಣಪತಿಗಳನ್ನ ವಿಶೇಷವಾಗಿ ಅಲಂಕರಿಸಿ ವಾಹನದಲ್ಲಿ ಮೆರವಣಿಗೆ ಮೂಲಕ ತರಲಾಗಿತ್ತು. ರಾತ್ರಿಯಿಡೀ ನಿದ್ದೆಯಿಲ್ಲದೇ ಜನ ಮೆರವಣಿಗೆಯಲ್ಲಿ ಭಾಗಿಯಾಗಿದ್ರು.
ಬೆಳಗಾವಿ ನಗರದಲ್ಲಿ ಈ ಸಲ 920ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡಲಾಗಿತ್ತು. ಮನೆಗಳಲ್ಲೇ ಬರೋಬ್ಬರಿ 26ಸಾವಿರ ಮೂರ್ತಿಗಳನ್ನ ಕೂರಿಸಿದ್ರು. ಗಣಪ ಮೂರ್ತಿಗಳು ರಸ್ತೆಗಳಲ್ಲಿ ಸಾಗ್ತಿದ್ರೆ ಜನ್ರೆಲ್ಲಾ ಸಖತ್ ಸ್ಟೆಪ್ಸ್ ಹಾಕ್ತಿದ್ರು. ಬಣ್ಣದೋಕುಳಿ ಆಡುತ್ತಾ ಸಂಭ್ರಮಿಸಿದ್ರು. ಎಲ್ಲಾ ಮೂರ್ತಿಗಳನ್ನ ಕ್ರೇನ್ ಸಹಾಯದಿಂದ ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆ ಮಾಡಲಾಯ್ತು. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ರಿಂದ ಹೆಜ್ಜೆ ಹೆಜ್ಜೆಗೂ ಹದ್ದಿನ ಕಣ್ಣಿಡಲಾಗಿತ್ತು.
Published on: Sep 10, 2022 10:18 PM