ಸಂಸದ ತೇಜಸ್ವಿ ಸೂರ್ಯಗೆ ಮಸಾಲೆ ದೋಸೆ ಪಾರ್ಸೆಲ್ ಕಳಿಸಿದ ಕಾಂಗ್ರೆಸ್ ಕಾರ್ಯಕರ್ತರು!
ಕಾರ್ಯಕರ್ತರು ನಗರದ ಖ್ಯಾತ ಹೊಟೆಲ್ ಗಳಿಂದ ಮಸಾಲೆ ದೋಸೆ, ಪೇಪರ್ ದೋಸೆ, ಬೆಣ್ಣೆ ದೋಸೆ ಮೊದಲಾದವುಗಳನ್ನು ತರಿಸಿ ಆಹಾರ ಡೆಲಿವರಿ ಮಾಡುವ ಡುನ್ಜೋ ಸಂಸ್ಥೆಯ ಮೂಲಕ ಸಂಸದರಿಗೆ ಪಾರ್ಸೆಲ್ ಕಳಿಸಿದ್ದಾರೆ.
ಬೆಂಗಳೂರು: ತಮ್ಮ ಕ್ಷೇತ್ರದಲ್ಲಿ ಜನ ನೆರೆಯಿಂದ ತತ್ತರಿಸಿದರೂ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೋಟೆಲೊಂದರಲ್ಲಿ ಮಸಾಲೆ ದೋಸೆ (Masale Dose) ತಿನ್ನುತ್ತಾ ಕುಳಿತಿದ್ದರು ಎಂದು ಹೇಳಿರುವ ಕಾಂಗ್ರೆಸ್ ಕಾರ್ಯಕರ್ತರು (Congress workers) ಶನಿವಾರ ಬೆಂಗಳೂರಲ್ಲಿ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಿದರು. ಕಾರ್ಯಕರ್ತರು ನಗರದ ಖ್ಯಾತ ಹೊಟೆಲ್ ಗಳಿಂದ ಮಸಾಲೆ ದೋಸೆ, ಪೇಪರ್ ದೋಸೆ, ಬೆಣ್ಣೆ ದೋಸೆ ಮೊದಲಾದವುಗಳನ್ನು ತರಿಸಿ ಆಹಾರ ಡೆಲಿವರಿ ಮಾಡುವ ಡುನ್ಜೋ ಸಂಸ್ಥೆಯ ಮೂಲಕ ಸಂಸದರಿಗೆ ಪಾರ್ಸೆಲ್ ಕಳಿಸಿದ್ದಾರೆ. ಕಳಿಸುವಾಗ ಒಬ್ಬ ಕಾರ್ಯಕರ್ತ ತೇಜಸ್ವಿಗೆ ಫೋನ್ ಮಾಡಿ ಪಾರ್ಸೆಲ್ ಕಳಿಸುತ್ತಿರುವ ಸಂಗತಿ ತಿಳಿಸುತ್ತಾರೆ.
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

