ಭಾರತಕ್ಕೆ ದುರ್ಬಲ ಪ್ರಧಾನಿ ಬೇಕು, ಬಲಾಢ್ಯ ಪ್ರಧಾನಿ ಬೇಡ: ಓವೈಸಿ
ಭಾರತಕ್ಕೆ ದುರ್ಬಲ ಪ್ರಧಾನಿ ಬೇಕು, ಬಲಾಢ್ಯ ಪ್ರಧಾನಿ ಬೇಡ ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿರುವುದು ಇದೀಗ ಎಲ್ಲೆಡೆ ಅಚ್ಚರಿಗೆ ಕಾರಣವಾಗಿದೆ.
ಭಾರತಕ್ಕೆ ದುರ್ಬಲ ಪ್ರಧಾನಿ ಬೇಕು, ಬಲಾಢ್ಯ ಪ್ರಧಾನಿ ಬೇಡ ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿರುವುದು ಇದೀಗ ಎಲ್ಲೆಡೆ ಅಚ್ಚರಿಗೆ ಕಾರಣವಾಗಿದೆ. ನರೇಂದ್ರ ಮೋದಿಯವರ ವಿರುದ್ಧ ಟೀಕೆ ಮಾಡಿದ ಅವರು, “ಜವಾಹರಲಾಲ್ ನೆಹರು ನಂತರದ ಅತ್ಯಂತ ಶಕ್ತಿಶಾಲಿ ಪ್ರಧಾನಿ ಎಂದರು. ಅಲ್ಲದೆ ನಿರುದ್ಯೋಗ, ಹಣದುಬ್ಬರ, ಚೀನಾದ ಒಳನುಗ್ಗುವಿಕೆ ಮತ್ತು ಕಾರ್ಪೊರೇಟ್ ತೆರಿಗೆ ಮತ್ತು ಕೈಗಾರಿಕೋದ್ಯಮಿಗಳ ಬ್ಯಾಂಕ್ ಸಾಲ ಮನ್ನಾ ಬಗ್ಗೆ ಪ್ರಶ್ನಿಸಿದಾಗ ವ್ಯವಸ್ಥೆಯನ್ನು ದೂಷಿಸಿದರು. ಅದರಂತೆ “ದೇಶಕ್ಕೆ ಈಗ ದುರ್ಬಲ ಪ್ರಧಾನಿ ಬೇಕು ಎಂದು ನಾನು ನಂಬುತ್ತೇನೆ. ನಾವು ಶಕ್ತಿಯುತ ಪ್ರಧಾನಿಯನ್ನು ನೋಡಿದ್ದೇವೆ, ಈಗ ನಮಗೆ ದುರ್ಬಲ ಪ್ರಧಾನಿ ಬೇಕು ಆದ್ದರಿಂದ ಅವರು ದುರ್ಬಲರಿಗೆ ಸಹಾಯ ಮಾಡಬಹುದು. ಶಕ್ತಿಯುತ ಪ್ರಧಾನಿ ಬಲಿಷ್ಠರಿಗೆ ಮಾತ್ರ ಸಹಾಯ ಮಾಡುತ್ತಿದ್ದಾರೆ” ಎಂದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ

ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ

ಪಹಲ್ಗಾಮ್: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
