ಗಂಗಾವತಿ ಕ್ಷೇತ್ರ: ಯಾರಿಗೆ ಕಾಂಗ್ರೆಸ್ ಟಿಕೆಟ್ ಅನ್ನುವ ಬಗ್ಗೆ ಗೊಂದಲ ಹೊರಹಾಕಿದರು ಆಕಾಂಕ್ಷಿ ಹೆಚ್ ಆರ್ ಶ್ರೀನಾಥ
ನಾಯಕ ಸಿದ್ದರಾಮಯ್ಯನವರ ಒಲವು ಮಾಜಿ ಸಚಿನ ಇಕ್ಬಾಲ್ ಅಹ್ಮದ್ ಅನ್ಸಾರಿ ಅವರ ಮೇಲಿರುವಂತಿದೆ. ಗುರುವಾರ ಕೊಪ್ಪಳದಲ್ಲಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಶ್ರೀನಾಥ ಟಿಕೆಟ್ ಬಗೆಗಿನ ಗೊಂದಲನ್ನು ಬಹಿರಂಗಗೊಳಿದರು.
Koppal: 2023ರ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಮನಸ್ಸಿನಲ್ಲಿ ದುಗುಡ ಶುರುವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ತೀವ್ರ ಪೈಪೋಟಿ ಶುರುವಾಗಿದೆ. ಇತ್ತೀಚಿಗೆ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ ಹೆಚ್ ಆರ ಶ್ರೀನಾಥ (HR Srinath) ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ ಹಿರಿಯ ನಾಯಕ ಸಿದ್ದರಾಮಯ್ಯನವರ (Siddaramaiah) ಒಲವು ಮಾಜಿ ಸಚಿನ ಇಕ್ಬಾಲ್ ಅಹ್ಮದ್ ಅನ್ಸಾರಿ (Iqbal Ansari) ಅವರ ಮೇಲಿರುವಂತಿದೆ. ಗುರುವಾರ ಕೊಪ್ಪಳದಲ್ಲಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಶ್ರೀನಾಥ ಟಿಕೆಟ್ ಬಗೆಗಿನ ಗೊಂದಲನ್ನು ಬಹಿರಂಗಗೊಳಿದರು.