‘ಗರಡಿ’ ಸಿನಿಮಾ ಟ್ರೈಲರ್ ಅನ್ನು ವಿಶೇಷ ವ್ಯಕ್ತಿಯಿಂದ ಬಿಡುಗಡೆ ಮಾಡಿಸಿದ ದರ್ಶನ್
‘ಗರಡಿ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ರಾಣೆಬೆನ್ನೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂದಿದ್ದ ನಟ ದರ್ಶನ್ ಸಿನಿಮಾದ ಟ್ರೈಲರ್ ಅನ್ನು ಲಾಂಚ್ ಮಾಡಬೇಕಿತ್ತು. ಆದರೆ ಟ್ರೈಲರ್ ಲಾಂಚ್ ಅನ್ನು ವಿಶೇಷ ಅತಿಥಿಯಿಂದ ಮಾಡಿಸಿದರು ದರ್ಶನ್.
‘ಗರಡಿ’ (Garadi) ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ರಾಣೆಬೆನ್ನೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂದಿದ್ದ ನಟ ದರ್ಶನ್ ಸಿನಿಮಾದ ಟ್ರೈಲರ್ ಅನ್ನು ಲಾಂಚ್ ಮಾಡಬೇಕಿತ್ತು. ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುವ ಸಂದರ್ಭ ಬಂದಾಗ ಮುಂದೆ ಕೂತಿದ್ದ ಯುವತಿ ಸೌಮ್ಯಾರನ್ನು ವೇದಿಕೆ ಮೇಲೆ ಕರೆದ ನಟ ದರ್ಶನ್ ಅವರಿಂದಲೇ ಟ್ರೈಲರ್ ಅನ್ನು ಲಾಂಚ್ ಮಾಡಿಸಿದರು. ಯೋಗರಾಜ್ ಭಟ್ ನಿರ್ದೇಶಿಸಿ, ಯಶಸ್ ಸೂರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಗರಡಿ’ ಸಿನಿಮಾ ನವೆಂಬರ್ 9 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 01, 2023 11:58 PM