Bigg Boss Kannada: ‘ಬಿಗ್ ಬಾಸ್ನಿಂದ ಹೊರಬಂದಿದ್ದು ನನ್ನದೇ ನಿರ್ಧಾರ’: ಕಾರಣ ತಿಳಿಸಿದ ಗೌರೀಶ್ ಅಕ್ಕಿ
‘ಅಲ್ಲಿ ನನಗೆ ಸ್ವಲ್ಪ ಅನ್ಕಂಫರ್ಟಬಲ್ ಅನಿಸಿತು. ಪ್ರತಿದಿನ ನನ್ನ ಜೀವನದಲ್ಲಿ ಸಾಕಷ್ಟು ಚಟುವಟಿಕೆ ನಡೆಯುತ್ತಿರುತ್ತವೆ. ನನ್ನಂಥವರನ್ನು ಒಂದು ದ್ವೀಪದಲ್ಲಿ ಇಟ್ಟರೆ ಮನಸ್ಸು ಮುದುಡುತ್ತದೆ. ಹಾಗಾಗಿ ಇದೇ ವಾರ ನನ್ನನ್ನು ಹೊರಗೆ ಕಳಿಸಿ ಎಂದು ನಾನು ಬಿಗ್ ಬಾಸ್ ಬಳಿ ಕೇಳಿಕೊಂಡಿದ್ದೆ. ಅದಕ್ಕೆ ತಕ್ಕಂತೆ ಆಯಿತು’ ಎಂದು ಗೌರೀಶ್ ಅಕ್ಕಿ ಹೇಳಿದ್ದಾರೆ.
ಎರಡನೇ ವಾರದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ಕಾರ್ಯಕ್ರಮದಿಂದ ಗೌರೀಶ್ ಅಕ್ಕಿ ಅವರು ಹೊರಬಂದರು. ದೊಡ್ಮನೆಗೆ ತೆರಳುವ ಎಲ್ಲರೂ 100 ದಿನಗಳ ಕಾಲ ಅಲ್ಲೇ ಇರಬೇಕು ಎಂದು ಬಯಸುತ್ತಾರೆ. ಆದರೆ ಗೌರೀಶ್ ಅಕ್ಕಿ (Gaurish Akki) ಅವರು ಸ್ವಇಚ್ಛೆಯಿಂದ ಆಟ ಮುಗಿಸಲು ಮುಂದಾದರು. ಅದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ಮೊದಲನೇ ವಾರದ ನಾಲ್ಕನೇ ದಿನವೇ ನಾನು ನಿರ್ಧರಿಸಿದ್ದೆ. ಇದು ನನಗೆ ಸಾಕು ಎನಿಸಿತು. ಅದಕ್ಕೆ ಸರಿಯಾಗಿ ಬಿಗ್ ಬಾಸ್ ಕಡೆಯಿಂದ ಪುಶ್ ಸಿಕ್ಕಿತು. ಅಲ್ಲಿ ಹೋದ ಮೇಲೆ ನನಗೆ ಸ್ವಲ್ಪ ಅನ್ಕಂಫರ್ಟಬಲ್ ಅನಿಸಿತು. ಪ್ರತಿದಿನ ನನ್ನ ಜೀವನದಲ್ಲಿ ಸಾಕಷ್ಟು ಚಟುವಟಿಕೆ ನಡೆಯುತ್ತಿರುತ್ತವೆ. ನನ್ನಂಥವರನ್ನು ಒಂದು ದ್ವೀಪದಲ್ಲಿ ಇಟ್ಟರೆ ಮನಸ್ಸು ಮುದುಡುತ್ತದೆ. ಹಾಗಾಗಿ ಇದೇ ವಾರ ನನ್ನನ್ನು ಹೊರಗೆ ಕಳಿಸಿ ಎಂದು ನಾನು ಬಿಗ್ ಬಾಸ್ ಬಳಿ ಕೇಳಿಕೊಂಡಿದ್ದೆ. ಅದಕ್ಕೆ ತಕ್ಕಂತೆ ಆಯಿತು. ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತದೆ. ಹಾಗಾಗಿ ಅಲ್ಲಿ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ. ಅದಕ್ಕೆ ಕೆಲವರು ಹೊಂದಿಕೊಳ್ಳುತ್ತಾರೆ. ನಾನು ಗೆಲ್ಲಲು ಹೋಗಿರಲಿಲ್ಲ. ಒಂದು ಅನುಭವಕ್ಕಾಗಿ ಹೋಗಿದ್ದೆ’ ಎಂದು ಗೌರೀಶ್ ಅಕ್ಕಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.