‘ಜೇಮ್ಸ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಗೀತಾ ಶಿವರಾಜ್ಕುಮಾರ್; ಇಲ್ಲಿದೆ ವಿಡಿಯೋ..
Geetha Shivarajkumar: ಗೀತಾ ಶಿವರಾಜ್ಕುಮಾರ್ ಅವರು ಚಿತ್ರಮಂದಿರಕ್ಕೆ ಬಂದು ‘ಜೇಮ್ಸ್’ ಸಿನಿಮಾ ನೋಡಿದರು. ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಅವರು ಕಣ್ಣೀರು ಹಾಕಿದರು.
ಪುನೀತ್ ರಾಜ್ಕುಮಾರ್ ( Puneeth Rajkumar) ಅವರ ನಿಧನದಿಂದ ಡಾ. ರಾಜ್ಕುಮಾರ್ ಕುಟುಂಬಕ್ಕೆ ಆದ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆ ನೋವಿನ ನಡುವೆಯೂ ಬದುಕು ಮುಂದೆ ಸಾಗಬೇಕಾದ ಅನಿವಾರ್ಯತೆ ಇದೆ. ಅಪ್ಪು ನಟನೆಯ ‘ಜೇಮ್ಸ್’ ಸಿನಿಮಾ (James movie) ಮಾ.17ರಂದು ತೆರೆಕಂಡಿತು. ಸಿನಿಮಾ ನೋಡಬೇಕು ಎಂದು ಶಿವರಾಜ್ಕುಮಾರ್ ಪತ್ನಿ ಗೀತಾ ಅವರು ಬಯಸಿದರು. ಶನಿವಾರ (ಮಾ.26) ಅವರು ಚಿತ್ರಮಂದಿರಕ್ಕೆ ಬಂದು ‘ಜೇಮ್ಸ್’ ಸಿನಿಮಾ ನೋಡಿದರು. ಈ ವೇಳೆ ಶಿವರಾಜ್ಕುಮಾರ್, ಉಪೇಂದ್ರ, ಕೆ.ಪಿ. ಶ್ರೀಕಾಂತ್ ಮುಂತಾದವರು ಜೊತೆಗಿದ್ದರು. ಸಿನಿಮಾ ಬಗ್ಗೆ ಗೀತಾ ಶಿವರಾಜ್ಕುಮಾರ್ (Geetha Shivarajkumar) ಅವರು ತಮ್ಮ ಅನಿಸಿಕೆ ಹಂಚಿಕೊಳ್ಳುವಾಗ ಸಖತ್ ಎಮೋಷನಲ್ ಆದರು. ಮುಂದೇನು ಮಾತನಾಡಬೇಕು ಎಂದು ತೋಚದೇ ಕಣ್ಣೀರು ಹಾಕಿದರು. ಅಪ್ಪು ನೆನಪು ಪ್ರತಿ ದಿನವೂ ಕಾಡುತ್ತಿದೆ. ಅವರು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಸಾಧ್ಯವಾಗುತ್ತಲೇ ಇಲ್ಲ.
ಇದನ್ನೂ ಓದಿ:
ಶಾಲೆಯ ಪರೀಕ್ಷೆಯಲ್ಲಿ ಪುನೀತ್ ಬಗ್ಗೆ ಪ್ರಶ್ನೆ; ಸಖತ್ ವೈರಲ್ ಆಗಿದೆ ಪ್ರಶ್ನೆಪತ್ರಿಕೆಯ ಫೋಟೋ
‘RRR’ ನೋಡಲು ಬಂದರು, ಪುನೀತ್ಗೆ ಜೈಕಾರ ಹಾಕಿದರು; ಅಪ್ಪು ಮೇಲಿನ ಅಭಿಮಾನ ನಿರಂತರ