AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತಂತ್ರ ಏನೂ ಇಲ್ಲ, ತಂದೆಯ ರೀತಿ ಜನಸೇವೆ ಮಾಡ್ತೀನಿ’: ಗೀತಾ ಶಿವರಾಜ್​ಕುಮಾರ್​

‘ತಂತ್ರ ಏನೂ ಇಲ್ಲ, ತಂದೆಯ ರೀತಿ ಜನಸೇವೆ ಮಾಡ್ತೀನಿ’: ಗೀತಾ ಶಿವರಾಜ್​ಕುಮಾರ್​

ಮದನ್​ ಕುಮಾರ್​
|

Updated on: Mar 11, 2024 | 7:13 PM

‘ತಂದೆಯ ರಾಜಕೀಯ ಜೀವನವನ್ನು ನೋಡಿಕೊಂಡು ನಾನು ಬೆಳೆದಿದ್ದೇನೆ. ಅವರ ಸರಳತೆ ನಮಗೂ ಬಂದಿದೆ. ಜನರಿಗೆ ಅವರು ಸಹಾಯ ಮಾಡುತ್ತಿದ್ದರು. ಅವರ ಆ ಗುಣ ನಮ್ಮೊಳಗೆ ಇರುತ್ತದೆ’ ಎಂದು ಗೀತಾ ಶಿವರಾಜ್​ಕುಮಾರ್​ ಅವರು ಹೇಳಿದ್ದಾರೆ. ಶೀಘ್ರದಲ್ಲೇ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದಿಂದ ಸ್ಪರ್ಧಿಸಲು ಗೀತಾ ಸಜ್ಜಾಗಿದ್ದಾರೆ.

ಶಿವಮೊಗ್ಗದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಗೀತಾ ಶಿವರಾಜ್​ಕುಮಾರ್​ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸ್ಪರ್ಧಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ (S Bangarappa) ಅವರ ಪುತ್ರಿ ಆಗಿರುವ ಗೀತಾ ಅವರ ಕುಟಂಬಕ್ಕೆ ರಾಜಕೀಯ ಹೊಸದೇನೂ ಅಲ್ಲ. ಈ ಹಿಂದೆ ಕೂಡ ಅವರ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಈಗ ಮತ್ತೆ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇತ್ತೀಚೆಗೆ ‘ಭೈರತಿ ರಣಗಲ್​’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗೀತಾ ಶಿವರಾಜ್​ಕುಮಾರ್​ (Geetha Shivarajkumar) ಅವರಿಗೆ ರಾಜಕೀಯದ ಕುರಿತು ಪ್ರಶ್ನೆ ಎದುರಾಯಿತು. ರಾಜಕೀಯದಲ್ಲಿ ತಂದೆಯಿಂದ ಕಲಿತ ತಂತ್ರಗಳನ್ನು ಬಳಸುತ್ತೀರಾ ಎಂದು ಕೇಳಿದ್ದಕ್ಕೆ ಗೀತಾ ಉತ್ತರ ನೀಡಿದ್ದಾರೆ. ‘ತಂತ್ರ ಏನೂ ಇಲ್ಲ. ನಮ್ಮ ತಂದೆ ಮೊದಲು ಶಾಸಕ ಆಗಿದ್ದು ನಾನು ಎರಡು ವರ್ಷದವಳಿದ್ದಾಗ. ಹಾಗಾಗಿ ನಾನು ಅವರ ರಾಜಕೀಯದ ಪಯಣವನ್ನು ಹತ್ತಿರದಿಂದ ಕಂಡಿದ್ದೇನೆ. ಏನೇ ಮಾಡಿದರೂ ಅವರು ಹೃದಯದಿಂದ ಮಾಡುತ್ತಿದ್ದರು. ಅದೇ ರೀತಿ ನಾನು ಕೆಲಸ ಮಾಡುತ್ತೇನೆ’ ಎಂದು ಗೀತಾ ಶಿವರಾಜ್​ಕುಮಾರ್​ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.