‘ಕನ್ನಡದ ಜನರು ಈಗಲೂ ಪ್ರೀತಿ ತೋರಿಸ್ತಾರೆ’; ಖುಷಿಯಿಂದ ಹೇಳಿದ ಜೆನಿಲಿಯಾ
ನಟಿ ಜೆನಿಲಿಯಾ ದೇಶ್ಮುಖ್ ಅವರು ಈಗಲೂ ಬೇಡಿಕೆಯ ನಟಿ ಆಗಿದ್ದಾರೆ. ಅವರು ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದ ಭಾಗವಾಗಿದ್ದಾರೆ. ಈ ಚಿತ್ರದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಟಿವಿ9 ಕನ್ನಡದ ಜೊತೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ನಟಿ ಜೆನಿಲಿಯಾ ದೇಶ್ಮುಖ್ (Genelia Deshmukh ) ಅವರು ಕಿರೀಟಿ ಜೊತೆ ‘ಜೂನಿಯರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜುಲೈ 18ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಜೆನಿಲಿಯಾ ಸಂದರ್ಶನ ನೀಡಿದ್ದಾರೆ. ‘ಬೊಮ್ಮರಿಲು ನನಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಜನರು ಈಗಲೂ ನನ್ನನ್ನು ನೆನಪಿಸಿನಲ್ಲಿ ಇಟ್ಟುಕೊಳ್ಳುತ್ತಿದ್ದಾರೆ, ಪ್ರೀತಿ ಕೊಟ್ಟಿದ್ದಾರೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

