ಚಿಕ್ಕಮಗಳೂರು: ಮುಳ್ಳಯ್ಯನ ಗಿರಿ ಸೇರಿದಂತೆ 88 ಪ್ರದೇಶಗಳಲ್ಲಿ ಜಿಯೋಲಾಜಿಕಲ್ ಸರ್ವೆ ತಂಡ ಪರಿಶೀಲನೆ

| Updated By: ಆಯೇಷಾ ಬಾನು

Updated on: Aug 10, 2024 | 12:36 PM

ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠ ರಸ್ತೆಯಲ್ಲಿ ನೂರಾರು ಅಡಿ ಪ್ರಪಾತಕ್ಕೆ ರಸ್ತೆ ಕುಸಿದಿತ್ತು. ಸದ್ಯ ಈಗ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಪೀಠ ಸೇರಿದಂತೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಪರಿಶೀಲನೆ ನಡೆಸುತ್ತಿದೆ.

ಚಿಕ್ಕಮಗಳೂರು, ಆಗಸ್ಟ್​.10: ಚಂದ್ರದ್ರೋಣ ಪರ್ವತದ (Chandra Drona Parvatha) ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ ತಂಡದಿಂದ ಪರಿಶೀಲನೆ ಆರಂಭವಾಗಿದೆ. ಗುಡ್ಡ, ಭೂ ಕುಸಿತ ಹಿನ್ನೆಲೆ ಜಿಯೋಲಾಜಿಕಲ್ ಸರ್ವೇ ತಂಡ (Geological Survey Of India) ಚಂದ್ರದ್ರೋಣ ಪರ್ವತದ ಕವಿಕಲ್ ಗಂಡಿ ಬಳಿ ಪರಿಶೀಲನೆ ನಡೆಸುತ್ತಿದೆ.

ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠ ರಸ್ತೆಯಲ್ಲಿ ನೂರಾರು ಅಡಿ ಪ್ರಪಾತಕ್ಕೆ ರಸ್ತೆ ಕುಸಿದಿತ್ತು. ಸದ್ಯ ಈಗ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಪೀಠ ಸೇರಿದಂತೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಪರಿಶೀಲನೆ ನಡೆಸುತ್ತಿದೆ. ಚಂದ್ರ ದ್ರೋಣ ಪರ್ವತ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಪೀಠ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರ ಸೇರಿ ಜಿಲ್ಲಾಡಳಿತ ಪಟ್ಟಿ ಮಾಡಿರುವ 88 ಪ್ರದೇಶಗಳಲ್ಲಿ ಪರಿಶೀಲನೆ ನಡೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ