ಘಟಪ್ರಭಾ ಪ್ರವಾಹಕ್ಕೆ ಮೆಳವಂಕಿ ಗ್ರಾಮ ಮುಳುಗಡೆ, 800 ಮನೆಗಳು ಜಲಾವೃತ
ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಗೋಕಾಕ್ ತಾಲೂಕಿನ ಮೆಳವಂಕಿ ಗ್ರಾಮಕ್ಕೆ ಘಟಪ್ರಭಾ ನದಿ ನೀರು ನುಗ್ಗಿದ್ದು, ಇಡೀ ಗ್ರಾಮ ಜಲಾವೃತಗೊಂಡಿದೆ. ಸುಮಾರು 800 ಮನೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, ಜನರ ಬದುಕೇ ಅತಂತ್ರವಾಗಿದೆ. ಮೆಳವಂಕಿ ಗ್ರಾಮದ ಸ್ಥಿತಿ ಈಗ ಹೇಗಿದೆ ಎಂಬುದರ ವಿಡಿಯೋ ಇಲ್ಲಿದೆ ನೋಡಿ.
ಬೆಳಗಾವಿ, ಜುಲೈ 30: ಬೆಳಗಾವಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿಯಿಂದಾಗಿ ಜನಜೀವನ ಸಂಕಷ್ಟಕ್ಕೀಡಾಗಿದೆ. ಘಟಪ್ರಭಾ ನದಿ ನೀರಿನ ಪ್ರವಾಹದಿಂದ ಜಿಲ್ಲೆಯ ಗೋಕಾಕ್ ತಾಲೂಕಿನ ಮೆಳವಂಕಿ ಗ್ರಾಮದ ಜನರ ಬದುಕೇ ಅತಂತ್ರವಾಗಿದೆ. ಭೀಕರ ಪ್ರವಾಹದಿಂದ ಮೇಳವಂಕಿ ಗ್ರಾಮ ಬಹುತೇಕ ಜಲಾವೃತಗೊಂಡಿದ್ದು, ಗ್ರಾಮದ ಜನರ ಬದುಕನ್ನೂ ಘಟಪ್ರಭೆ ಮುಳುಗಿಸಿಬಿಟ್ಟಿದೆ.
ಒಂದೇ ಗ್ರಾಮದಲ್ಲಿ 800 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ಅವಾಂತರ ಸೃಷ್ಟಿಯಾಗಿದೆ. ಮನೆಗಳ ಅರ್ಧದಷ್ಟು ಭಾಗ ನೀರಲ್ಲಿ ಮುಳುಗಿದೆ. ನಡು ರಸ್ತೆಯಲ್ಲಿಯೇ ಸೊಂಟದ ಮಟ್ಟದ ನೀರಲ್ಲಿ ಜನರು ಓಡಾಡುತ್ತಿದ್ದಾರೆ.
ಇದನ್ನೂ ಓದಿ: ಹಾಸನ: ಸಕಲೇಶಪುರದ ಹಾರ್ಲೇ ಎಸ್ಟೇಟ್ ಬಳಿ ಭಯಾನಕ ಭೂ ಕುಸಿತ, ರಸ್ತೆ ಸಮೇತ ಕೊಚ್ಚಿ ಹೋದ ಭೂಮಿ
2019, 2021 ರಲ್ಲೂ ಸಹ ಮೆಳವಂಕಿ ಗ್ರಾಮ ಮುಳುಗಿ ನಡು ಗಡ್ಡೆಯಂತಾಗಿತ್ತು. ಇಡೀ ಗ್ರಾಮಕ್ಕೆ ನುಗ್ಗಿದ್ದ ಘಟಪ್ರಭಾ ನದಿ ನೀರು ನುಗ್ಗಿದ ಕಾರಣ ಹೊಲ, ಗದ್ದೆ, ದೇವಸ್ಥಾನ, ಮನೆಗಳು ನೀರಿನಿಂದಾವೃತಗೊಂಡಿವೆ. ಇಡೀ ಗ್ರಾಮವನ್ನೇ ಘಟಪ್ರಭೆ ತನ್ನೊಡಲಿಗೆ ಹಾಕಿಕೊಂಡ ದೃಶ್ಯ ಡ್ರೋನ್ ಕ್ಯಾಮರಾದಲ್ಲಿಯೂ ಸೆರೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ