Gift Politics: ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ರಿಂದ ಸೀರೆ, ಬೆಡ್ಶಿಟ್ ಹಂಚಿಕೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಎಂಟಿಬಿ ನಾಗರಾಜ್ ಸೀರೆ, ಬೆಡ್ಶಿಟ್ಗಳನ್ನು ಹಂಚುತ್ತಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನ ಮತದಾರರ ಮನವೊಲಿಕೆಗೆ ರಾಜಕೀಯ ಪಕ್ಷಗಳು ಕಸರತ್ತು ನಡೆಸಿವೆ. ಇದರ ಭಾಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗಾಗಿ ಹಣದ ಹೊಳೆ ಹರಿಯುತ್ತಿದೆ. ಈ ಹಿಂದೆ ಮುಸ್ಲಿಂ ಮತಗಳ ಒಲೈಕೆಗೆ ಕವ್ವಾಲಿ ಮಾಡಿಸಿದ್ದ ಸಚಿವ ಎಂಟಿಬಿ ನಾಗರಾಜ್, ಇದೀಗ ಶಿವರಾತ್ರಿಗೆ 60 ಅಡಿ ಎತ್ತರದ ಶಿವ ಲಿಂಗ ಪ್ರತಿಷ್ಠಾಪಿಸಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಜೊತೆಗೆ ಹೋದಕಡೆಯಲೆಲ್ಲ ಸೀರೆ, ಬೆಡ್ಶಿಟ್ಗಳನ್ನು ಹಂಚುತ್ತಿದ್ದಾರೆ. ಈ ಮೂಲಕ ಕ್ಷೇತ್ರದ ಮತದಾರರನ್ನು ಸೆಳೆಯಲು ಗಾಳ ಹಾಕಿದ್ದಾರೆ.