ಅಶ್ವಿನಿ ಗೌಡಗೆ ಸಿಕ್ಕಾಪಟ್ಟೆ ಕ್ವಾಟ್ಲೆ ಕೊಟ್ಟ ಗಿಲ್ಲಿ ನಟ: ಬಿಗ್ ಬಾಸ್ ಮನೆ ತುಂಬ ನಗು

Updated on: Oct 02, 2025 | 10:59 PM

ಗಿಲ್ಲಿ ನಟ ಇದ್ದಲ್ಲಿ ನಗುವಿಗೆ ಕೊರತೆ ಇಲ್ಲ. ಬಿಗ್ ಬಾಸ್ ಮನೆಯಲ್ಲಿ ಸಹ ಅದು ಮುಂದುವರಿದಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಸ್ಪರ್ಧಿ ಆಗಿರುವ ಗಿಲ್ಲಿ ನಟ ಸಖತ್ ಕೀಟಲೆ ಮಾಡುತ್ತಿದ್ದಾರೆ. ಅಶ್ವಿನಿ ಗೌಡ ಎದುರು ಅವರು ಮುಖಾಮುಖಿ ಆಗುತ್ತಿದ್ದಾರೆ.

ಕಾಮಿಡಿ ಕಲಾವಿದ ಗಿಲ್ಲಿ ನಟ (Gilli Nata) ಇದ್ದಲ್ಲಿ ನಗು ಇದ್ದೇ ಇರುತ್ತದೆ. ಬಿಗ್ ಬಾಸ್ ಮನೆಯಲ್ಲಿ ಕೂಡ ಅದು ಮುಂದುವರಿದಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋ ಸ್ಪರ್ಧಿ ಆಗಿರುವ ಗಿಲ್ಲಿ ನಟ ಸಿಕ್ಕಾಪಟ್ಟೆ ಕೀಟಲೆ ಮಾಡುತ್ತಿದ್ದಾರೆ. ಅದರಲ್ಲೂ ಅಶ್ವಿನಿ ಗೌಡ (Ashwini Gowda) ಎದುರು ಅವರು ಆಗಾಗ ಮುಖಾಮುಖಿ ಆಗುತ್ತಿದ್ದಾರೆ. ಅವರಿಬ್ಬರ ನಡುವಿನ ಜಗಳವೇ ನಗು ಉಕ್ಕಿಸುತ್ತಿದೆ. ಗಂಭೀರವಾಗಿ ಇರಬೇಕಾದ ಸಂದರ್ಭದಲ್ಲೂ ಗಿಲ್ಲಿ ನಟ ಕಾಮಿಡಿ ಮಾಡುತ್ತಿದ್ದಾರೆ. ಅದರಿಂದ ಮುಂದೆ ಅವರಿಗೆ ತೊಂದರೆ ಆದರೂ ಅಚ್ಚರಿ ಏನಿಲ್ಲ. ಅಕ್ಟೋಬರ್ 2ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 02, 2025 10:58 PM