ಗಿಲ್ಲಿ ಎಂದರೆ ಯಾಕೆ ಅಷ್ಟು ಇಷ್ಟ? ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಹೇಳಿದ್ದಿಷ್ಟು..
ಗಿಲ್ಲಿ ನಟ ಅವರಿಗೆ ಇರುವ ಫ್ಯಾನ್ ಫಾಲೋಯಿಂಗ್ ಬಹಳ ದೊಡ್ಡದು. ಎಷ್ಟರಮಟ್ಟಿಗೆ ಎಂದರೆ ಗಿಲ್ಲಿ ಅವರ ಭಾವಚಿತ್ರವನ್ನು ಅನೇಕರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಗಿಲ್ಲಿ ನಟ ಅವರೇ ಫಿನಾಲೆಯಲ್ಲಿ ಟ್ರೋಫಿ ಗೆಲ್ಲುತ್ತಾರೆ ಎಂಬುದು ಅಭಿಮಾನಿಗಳ ನಂಬಿಕೆ. ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಈಗ ಟಿವಿ9 ಜೊತೆ ಮಾತನಾಡಿದ್ದಾರೆ.
ಕಾಮಿಡಿ ಕಲಾವಿದ ಗಿಲ್ಲಿ ನಟ (Gilli Nata) ಅವರಿಗೆ ಇರುವ ಅಭಿಮಾನಿ ಬಳಗ ಬಹಳ ದೊಡ್ಡದು. ಎಷ್ಟರಮಟ್ಟಿಗೆ ಎಂದರೆ ಗಿಲ್ಲಿ ಅವರ ಭಾವಚಿತ್ರವನ್ನು ಅನೇಕರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಗಿಲ್ಲಿ ಅವರೇ ಈ ಬಾರಿ ಟ್ರೋಫಿ ಗೆಲ್ಲುತ್ತಾರೆ ಎಂಬುದು ಅಭಿಮಾನಿಗಳ ನಂಬಿಕೆ. ಟ್ಯಾಟೂ (Gilli Nata Tattoo) ಹಾಕಿಸಿಕೊಂಡ ಅಭಿಮಾನಿ ಗಿರೀಶ್ ಈಗ ಟಿವಿ9 ಜೊತೆ ಮಾತನಾಡಿದ್ದಾರೆ. ‘ನಾನು ಡ್ರೈವರ್. ಕೆಲಸ ಮುಗಿಸಿ ಬಂದು ಗಿಲ್ಲಿಯ ವಿಡಿಯೋ ನೋಡಿದರೆ ಮತ್ತೆ ಕೆಲಸ ಮಾಡಬೇಕು ಎಂಬ ಚೈತನ್ಯ ಬರುತ್ತದೆ. ಅವರು ರೈತನ ಮಗ. ಹಾಗಾಗಿ ಅವರು ಬೆಳೆಯಬೇಕು. ಕಾಮಿಡಿ ಕಿಲಾಡಿಗಳು ಶೋ ನೋಡಿ ನಾನು ಅವರ ಅಭಿಮಾನಿ ಆದೆ. ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಗೆದ್ದೇ ಗೆಲ್ಲುತ್ತಾರೆ’ ಎಂದು ಗಿರೀಶ್ ಅವರು ಹೇಳಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಫಿನಾಲೆ ಜನವರಿ 18ರಂದು ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
