4 ತಿಂಗಳು ಹೇಗೆ ಕಳೆಯಿತೋ ಗೊತ್ತಿಲ್ಲ; ಗಿಲ್ಲಿ ಕಾಮಿಡಿ ನೋಡಿ ಬಿಗ್ ಬಾಸ್ ವೀಕ್ಷಕರ ಮನದ ಮಾತು
ಬಿಗ್ ಬಾಸ್ ಕನ್ನಡ 12 ಅಂತಿಮ ಹಂತಕ್ಕೆ ಬಂದಿದೆ. ಇಂದು (ಜ.18) ಅದ್ದೂರಿಯಾಗಿ ಫಿನಾಲೆ ನಡೆಯುತ್ತಿದೆ. ಗಿಲ್ಲಿ ನಟ ವಿನ್ ಆಗುತ್ತಾರೆ ಎಂದು ಅವರ ಅಭಿಮಾನಿಗಳಿಗೆ ಶೇಕಡ 100ರಷ್ಟು ಭರವಸೆ ಇದೆ. ಮಂಡ್ಯದಲ್ಲಿ ಗಿಲ್ಲಿ ಅವರ ಬ್ಯಾನರ್ಗೆ ಎಳನೀರಿನ ಅಭಿಷೇಕ ಮಾಡಲಾಗಿದೆ. ವಿಡಿಯೋ ಇಲ್ಲಿದೆ..
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ (BBK 12) ಅಂತಿಮ ಹಂತಕ್ಕೆ ಬಂದಿದೆ. ಇಂದು (ಜನವರಿ 18) ಅದ್ದೂರಿಯಾಗಿ ಫಿನಾಲೆ ನಡೆಯುತ್ತಿದೆ. ಗಿಲ್ಲಿ ನಟ ಅವರು ವಿನ್ ಆಗುತ್ತಾರೆ ಎಂದು ಅವರ ಅಭಿಮಾನಿಗಳಿಗೆ ಶೇಕಡ 100ರಷ್ಟು ಭರವಸೆ ಇದೆ. ಮಂಡ್ಯದಲ್ಲಿ ಗಿಲ್ಲಿ ನಟ (Gilli Nata) ಅವರ ಬ್ಯಾನರ್ಗೆ ಎಳನೀರಿನ ಅಭಿಷೇಕ ಮಾಡಲಾಗಿದೆ. ‘ಡಮಾಲ್ ಡಿಮೀಲ್ ಡಕ್ಕಾ, ಗಿಲ್ಲಿ ಗೆಲ್ಲೋದು ಪಕ್ಕಾ’ ಎಂಬ ಸ್ಲೋಗನ್ ಎಲ್ಲ ಕಡೆಗಳಲ್ಲಿ ಕೇಳಿಬರುತ್ತಿದೆ. ‘ನಾವು ಪ್ರತಿ ದಿನ ಬಿಗ್ ಬಾಸ್ ನೋಡಿದ್ದೇ ಗಿಲ್ಲಿ ನಟ ಅವರ ಹಾಸ್ಯಕ್ಕಾಗಿ. ಗಿಲ್ಲಿಗೆ ಸರಿಸಾಟಿ ಯಾರೂ ಇಲ್ಲ. 4 ತಿಂಗಳು ಹೇಗೆ ಕಳೆಯಿತು ಅಂತ ಗೊತ್ತಾಗಲೇ ಇಲ್ಲ. ಅವನು ರೈತರ ಮಗ. ಪಳಾರ್ ಗಿಲ್ಲಿಗೆ ಜಯವಾಗಲಿ’ ಎಂದು ಫ್ಯಾನ್ಸ್ ಹೇಳಿದ್ದಾರೆ. ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ ಶೈವ, ಧನುಷ್ ಗೌಡ ಮತ್ತು ಮ್ಯೂಟೆಂಟ್ ರಘು ಅವರು ಫಿನಾಲೆಗೆ (Bigg Boss Kannada Finale) ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
