Gilli Nata
ಗಿಲ್ಲಿ ನಟ ಅವರು ಕನ್ನಡ ಚಿತ್ರರಂಗದ ಹಾಸ್ಯ ನಟ. ಹಲವು ರಿಯಾಲಿಟಿ ಶೋಗಳನ್ನು ಅವರು ಮಾಡಿದ್ದಾರೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೂಲಕ ಅಪಾರ ಜನಪ್ರಿಯತೆಯನ್ನು ಅವರು ಪಡೆದುಕೊಂಡಿದ್ದಾರೆ. ಗಿಲ್ಲಿ ನಟ ಅವರು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ಅವರು. ಸೆಟ್ ಬಾಯ್ ಆಗಿದ್ದ ಅವರು ನಂತರ ಬಣ್ಣದ ಲೋಕಕ್ಕೆ ಬಂದು ಮಿಂಚಿದರು. ಅವರು ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, ‘ಕಾಮಿಡಿ ಕಿಲಾಡಿಗಳು’ ರೀತಿಯ ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಎಲ್ಲಾ ಶೋಗಳಲ್ಲಿ ಅವರು ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟುಕೊಂಡಿದ್ದಾರೆ. 2025ರ ಡಿಸೆಂಬರ್ 11ರಂದು ರಿಲೀಸ್ ಆದ ‘ಡೆವಿಲ್’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ಇನ್ಸ್ಟಾಗ್ರಾಮ್ನಲ್ಲಿ ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ.
ಸ್ಟೈಲಿಶ್ ಆಗಿ ಗಿಲ್ಲಿಗೆ ಆಲ್ ದಿ ಬೆಸ್ಟ್ ಹೇಳಿದ ಶಿವಣ್ಣ; ವಿಡಿಯೋ ನೋಡಿ
‘ಗಿಲ್ಲಿ ಆಲ್ ದ ಬೆಸ್ಟ್. 100 ಪರ್ಸೆಂಟ್’ ಎಂದು ಶಿವಣ್ಣ ಹೇಳಿದ್ದಾರೆ. ‘ಬಿಗ್ ಬಾಸ್ ಕನ್ನಡ 12’ ಫಿನಾಲೆ ಜ.17 ಹಾಗೂ 18ರಂದು ನಡೆಯಲಿದೆ. ಅಶ್ವಿನಿ ಗೌಡ, ಧನುಷ್, ಮ್ಯೂಟೆಂಟ್ ರಘು, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ ಫಿನಾಲೆ ತಲುಪಿದ್ದಾರೆ.
- Madan Kumar
- Updated on: Jan 16, 2026
- 4:49 pm
ನನ್ನ ಮದುವೆಗೆ ಏನಾದರೂ ತೊಂದ್ರೆ ಆದ್ರೆ ಗಿಲ್ಲಿಯೇ ಕಾರಣ; ನೇರವಾಗಿ ಹೇಳಿದ ಕಾವ್ಯಾ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಾವ್ಯಾ ಹಾಗೂ ಗಿಲ್ಲಿ ನಟ ಆಗಾಗ ಕಿತ್ತಾಡುತ್ತಾ ಇರುತ್ತಾರೆ. ಈಗ ಮದುವೆ ವಿಷಯ ಬಂದಿದೆ. ನನ್ನ ಮದುವೆಗೆ ಏನಾದರೂ ತೊಂದರೆ ಆದರೆ ಗಿಲ್ಲಿ ಕಾರಣ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
- Rajesh Duggumane
- Updated on: Jan 16, 2026
- 4:49 pm
ಬಿಗ್ ಬಾಸ್ನ ಗಿಲ್ಲಿನೇ ಗೆಲ್ಲೋದು; ಟೇಬಲ್ ತಟ್ಟಿ ಭವಿಷ್ಯ ನುಡಿದ ಶಿವಣ್ಣ
ಶಿವರಾಜ್ಕುಮಾರ್ ಅವರು ಗಿಲ್ಲಿ ಬಿಗ್ ಬಾಸ್ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಪರಿಚಿತರಾದ ಇವರ ಬಾಂಧವ್ಯ ಈಗಲೂ ಗಟ್ಟಿಯಾಗಿದೆ. ಗಿಲ್ಲಿಯ ಪ್ರತಿಭೆಗೆ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಗಿಲ್ಲಿ ಅಭಿಮಾನಿಗಳಿಗೆ ಖುಷಿ ತಂದಿವೆ. ಶಿವಣ್ಣನ ವಿಡಿಯೋ ಈಗ ವೈರಲ್ ಆಗಿದೆ.
- Rajesh Duggumane
- Updated on: Jan 16, 2026
- 4:48 pm
‘ಹೊರ ಹೋದ್ಮೇಲೆ ಬ್ಲಾಕ್ ಮಾಡ್ತೀನಿ’; ಬ್ಲ್ಯಾಕ್ಮೇಲ್ ಮಾಡಿದ ಕಾವ್ಯಾಗೆ ತಿರುಗೇಟು ಕೊಟ್ಟ ಗಿಲ್ಲಿ
‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಗಿಲ್ಲಿ-ಕಾವ್ಯಾ ನಡುವಿನ ಗೆಳೆತನ ವೀಕ್ಷಕರಿಗೆ ಇಷ್ಟವಾಗಿದೆ. ಈ ಗೆಳೆತನದಲ್ಲಿ ಕೆಲವೊಮ್ಮೆ ಗಿಲ್ಲಿಗೆ ನೋವು ಮಾಡಿದ್ದೇನೆ ಎಂದು ಕಾವ್ಯಾ ಈಗ ಕ್ಷಮೆ ಕೇಳಿದ್ದಾರೆ. ಬಿಗ್ ಬಾಸ್ ನೀಡಿದ ಚಟುವಟಿಕೆಯಲ್ಲಿ ಕಾವ್ಯಾ, ಗಿಲ್ಲಿಗೆ ತಾವು ಮಾಡಿರುವ ತಪ್ಪುಗಳ ಬಗ್ಗೆ ಮಾತನಾಡಿ, ಕ್ಷಮೆ ಯಾಚಿಸಿದರು. ಈ ವೇಳೆ, "ಹೊರಗೆ ಹೋಗ್ತಿದ್ದಂತೆ ನಿನ್ನನ್ನು ಬ್ಲಾಕ್ ಮಾಡ್ತೀನಿ" ಎಂದು ಕಾವ್ಯಾ ಹೇಳಿದರು.
- Rajesh Duggumane
- Updated on: Jan 16, 2026
- 4:50 pm