AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಬಳಿಕ ಮುಂದಿನ ಪ್ರಾಜೆಕ್ಟ್ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಗಿಲ್ಲಿ ನಟ

ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ ನಟ ಹವಾ ಮುಂದುವರಿದಿದೆ. ವಿವಿಧ ಉತ್ಸವಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈಗ ಅವರ ಕಡೆಯಿಂದ ದೊಡ್ಡ ಅಪ್‌ಡೇಟ್: ಗಿಲ್ಲಿ ನಟ ಚೊಚ್ಚಲ ಸಿನಿಮಾ ನಿರ್ದೇಶನಕ್ಕೆ ಸಿದ್ಧರಾಗಿದ್ದಾರೆ! ಕಿರುಚಿತ್ರ ನಿರ್ದೇಶನದ ಅನುಭವ ಹೊಂದಿರುವ ಅವರು, ಕಥೆಯನ್ನು ಸಿದ್ಧಪಡಿಸಿದ್ದಾರೆ ಮತ್ತು ಶೀಘ್ರದಲ್ಲೇ ಸ್ಕ್ರಿಪ್ಟ್ ಬರೆಯಲಿದ್ದಾರೆ.

ಬಿಗ್ ಬಾಸ್ ಬಳಿಕ ಮುಂದಿನ ಪ್ರಾಜೆಕ್ಟ್ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಗಿಲ್ಲಿ ನಟ
ಗಿಲ್ಲಿ ನಟ
ರಾಜೇಶ್ ದುಗ್ಗುಮನೆ
|

Updated on: Feb 18, 2026 | 8:42 AM

Share

ಸೋಶಿಯಲ್ ಮೀಡಿಯಾ, ಯೂಟ್ಯೂಬ್ ತೆಗೆದರೆ ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss) ವಿನ್ನರ್ ಗಿಲ್ಲಿ ನಟ ಅವರೇ ಕಾಣಿಸಿಕೊಳ್ಳುತ್ತಾರೆ. ಅವರು ವಿವಿಧ ಉತ್ಸವಗಳಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಇದಕ್ಕೆ ಕಾರಣ. ಈಗ ಗಿಲ್ಲಿ ನಟನ ಕಡೆಯಿಂದ ದೊಡ್ಡ ಅಪ್​​ಡೇಟ್ ಸಿಕ್ಕಿದೆ. ಮುಂದಿನ ಸಿನಿಮಾ ಯಾವುದು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅವರಿಗೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ.

ಬಿಗ್ ಬಾಸ್ ಪೂರ್ಣಗೊಂಡು ತಿಂಗಳ ಮೇಲಾಗಿದೆ. ಆದಾಗ್ಯೂ ಗಿಲ್ಲಿ ನಟನ ಹವಾ ಮಾತ್ರ ಕಡಿಮೆ ಆಗಿಲ್ಲ. ಅವರು ಹೋದಲ್ಲಿ-ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ತಮ್ಮನ್ನು ಭೇಟಿ ಮಾಡಲು ಬರೋ ಅಭಿಮಾನಿಗಳನ್ನು ಅವರು ಪ್ರೀತಿಯಿಂದ ಮಾತನಾಡಿಸುತ್ತಿದ್ದಾರೆ. ಈ ಮಧ್ಯೆ ಗಿಲ್ಲಿ ನಟ ಅವರು ಮುಂದಿನ ಪ್ರಾಜೆಕ್ಟ್ ಯಾವುದು ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ.

ಗಿಲ್ಲಿ ಮಟ ಅವರು ಉತ್ತಮ ನಟ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಸ್ಯ ಪ್ರಧಾನ ಕಿರುಚಿತ್ರ ಹಾಗೂ ರಿಯಾಲಿಟಿ ಶೋಗಳ ಮೂಲಕ ಇದು ಸಾಬೀತಾಗಿದೆ. ಇದರ ಜೊತೆಗೆ ಅವರಲ್ಲಿ ಓರ್ವ ನಿರ್ದೇಶಕ ಕೂಡ ಇದ್ದಾನೆ. ಈಗಾಗಲೇ ಕೆಲವು ಕಿರುಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಈ ಕಿರುಚಿತ್ರಗಳು ಗಮನ ಸೆಳೆದಿವೆ. ಈ ಕಿರುಚಿತ್ರಗಳ ಮೂಲಕ ಅವರು ಫೇಮಸ್ ಆಗಿದ್ದಾರೆ. ಈಗ ಅವರು ಸಿನಿಮಾ ನಿರ್ದೇಶನ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗೆ ಬಂತು ಬೆದರಿಕೆ; 10 ಕೋಟಿ ರೂಪಾಯಿಗೆ ಬೇಡಿಕೆ

ಸಿನಿಮಾದಲ್ಲಿ ನಟಿಸೋದು ಎಂದರೆ ನಿರ್ದೇಶನ ಮಾಡಿದ್ದಕ್ಕಿಂತ ಸುಲಭ. ನಿರ್ದೇಶಕರು ಸ್ಕ್ರಿಪ್ಟ್ ರೆಡಿ ಮಾಡಿ ಇಟ್ಟಿರುತ್ತಾರೆ. ಬಂದು ನಟಿಸಿ ಹೋದರೆ ಆಯ್ತು. ಆದರೆ, ನಿರ್ದೇಶನ ಮಾಡೋದು ಅಷ್ಟು ಸುಲಭ ಅಲ್ಲ. ಸಿನಿಮಾ ಆರಂಭದಿಂದ ಹಿಡಿದು ಕೊನೆಯವರೆಗೂ ಅವರೇ ಶ್ರಮ ಹಾಕಿ ಕೆಲಸ ಮಾಡಬೇಕು. ಸದ್ಯ ಗಿಲ್ಲಿ ವಿವಿಧ ಉತ್ಸವಗಳಿಗೆ ತೆರಳುತ್ತಿದ್ದಾರೆ. ಇದು ಪೂರ್ಣಗೊಂಡ ಬಳಿಕ ಅವರು ಸ್ಕ್ರಿಪ್ಟ್ ಬರೆಯೋಕೆ ಕುಳಿತುಕೊಳ್ಳಲಿದ್ದಾರೆ. ವಿಶೇಷ ಎಂದರೆ ಅವರ ಬಳಿ ಕಥೆ ಕೂಡ ರೆಡಿ ಇದೆಯಂತೆ. ಇದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ