ಸುದೀಪ್ ಬರುವ ಮೊದಲೇ ಗಿಲ್ಲಿಯ ‘ಕೆಂಪೇಗೌಡ’ ಮೀಸೆ ಬೋಳಿಸಿದ ಸ್ಪರ್ಧಿಗಳು

Updated By: ರಾಜೇಶ್ ದುಗ್ಗುಮನೆ

Updated on: Oct 25, 2025 | 9:26 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗಿಲ್ಲಿ ನಟ ಗಮನ ಸೆಳೆಯುತ್ತಿದ್ದಾರೆ. ಅವರು ಇತ್ತೀಚೆಗೆ ದೊಡ್ಡದಾಗಿ ಮೀಸೆ ಮಾಡಿಕೊಂಡಿದ್ದರು. ಅವರು ಈಗ ಸುದ್ದಿ ಆಗಿದ್ದಾರೆ. ಮನೆಯ ಎಲ್ಲಾ ಸ್ಪರ್ಧಿಗಳು ಸೇರಿ ಗಿಲ್ಲಿ ನಟನ ಮೀಸೆ ಬೋಳಿಸಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.

‘ಕೆಂಪೇಗೌಡ’ ಸಿನಿಮಾದಲ್ಲಿ ಸುದೀಪ್ ಅವರ ಮೀಸೆ ಸಾಕಷ್ಟು ಗಮನ ಸೆಳೆದಿತ್ತು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಬಳಿಕ ಅನೇಕರು ಸುದೀಪ್ ರೀತಿಯೇ ಮೀಸೆ ಬಿಟ್ಟಿದ್ದರು. ಗಿಲ್ಲಿ ನಟ ಕೂಡ ಇದನ್ನೇ ಅನುಕರಿಸಿದ್ದರು. ಈಗ ಸುದೀಪ್ ಬರುವ ಮೊದಲೇ ಇದಕ್ಕೆ ಕತ್ತರಿ ಬಿದ್ದಿದೆ. ಅನೇಕರು ಇದಕ್ಕೆ ಸಹಾಯ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.