ಸುದೀಪ್ ಎದುರಲ್ಲೇ ಧ್ರುವಂತ್ ಕಾಲೆಳೆದ ಗಿಲ್ಲಿ ನಟ: ಕೂಡಲೇ ಬಂತು ತಿರುಗೇಟು
‘ಬಿಗ್ ಬಾಸ್ ಕನ್ನಡ 12’ ಶೋನಲ್ಲಿ ಗಿಲ್ಲಿ ಮಿಂಚುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಅವರು ಎಲ್ಲರ ಕಾಲೆಳೆಯುತ್ತಾರೆ. ಭಾನುವಾರದ (ಡಿ.7) ಸಂಚಿಕೆಯಲ್ಲಿ ಸಹ ಅವರು ಸುದೀಪ್ ಎದುರಲ್ಲೇ ತಮಾಷೆ ಮಾಡಿದ್ದಾರೆ. ಧ್ರುವಂತ್, ರಘು, ಸೂರಜ್ ಸಿಂಗ್ ಮುಂತಾದವರ ಬಗ್ಗೆ ಕಾಮಿಡಿ ಪಂಚ್ ನೀಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋನಲ್ಲಿ ಗಿಲ್ಲಿ ಮಿಂಚುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಅವರು ಎಲ್ಲರ ಕಾಲೆಳೆಯುತ್ತಾರೆ. ಭಾನುವಾರದ (ಡಿಸೆಂಬರ್ 7) ಸಂಚಿಕೆಯಲ್ಲಿ ಕೂಡ ಅವರು ಕಿಚ್ಚ ಸುದೀಪ್ ಎದುರಲ್ಲೇ ತಮಾಷೆ ಮಾಡಿದ್ದಾರೆ. ಧ್ರುವಂತ್ (Dhruvanth), ಸೂರಜ್ ಸಿಂಗ್, ರಘು ಮುಂತಾದವರ ಬಗ್ಗೆ ಕಾಮಿಡಿ ಪಂಚ್ ನೀಡಿದ್ದಾರೆ. ಅದನ್ನು ಕಂಡು ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಗಿಲ್ಲಿಯ ಮಾತುಗಳಿಗೆ ಧ್ರುವಂತ್ ಅವರು ಇತ್ತೀಚೆಗೆ ತಿರುಗೇಟು ನೀಡಲು ಆರಂಭಿಸಿದ್ದಾರೆ. ‘ಗಿಲ್ಲಿ (Gilli Nata) ಅವರು ಜಿಗಣೆ ಥರ. ತಾನು ಬದುಕಬೇಕು ಎಂದರೆ ಯಾರನ್ನಾದರೂ ಕಚ್ಚುತ್ತಾ ಇರಬೇಕು’ ಎಂದು ಧ್ರುವಂತ್ ಹೇಳಿದ್ದಾರೆ. ಡಿ.7ರ ಸಂಚಿಕೆಯ ಪ್ರೋಮೋ ಇಲ್ಲಿದೆ. ‘ಕಲರ್ಸ್ ಕನ್ನಡ’ ಮತ್ತು ‘ಜಿಯೋ ಹಾಟ್ಸ್ಟಾರ್’ ಒಟಿಟಿಯಲ್ಲಿ ಪೂರ್ತಿ ಸಂಚಿಕೆ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
