ನಾನು ಕಮಿಟೆಡ್: ಸುದೀಪ್ ಎದುರಲ್ಲೇ ಕಾವ್ಯ ವಿಚಾರಕ್ಕೆ ಸ್ಪಷ್ಟನೆ ನೀಡಿದ ಗಿಲ್ಲಿ ನಟ
ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಹಿಂದೆ ಬಿದ್ದಿದ್ದಾರೆ. ಈ ವಿಷಯ ಸೀಕ್ರೆಟ್ ಆಗಿಲ್ಲ. ಅದನ್ನೇ ಇಟ್ಟುಕೊಂಡು ಭಾನುವಾರದ (ನ.2) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಗಿಲ್ಲಿಯ ಕಾಲೆಳೆದಿದ್ದಾರೆ. ಅದಕ್ಕೆ ಬಿಗ್ ಬಾಸ್ ಮನೆಯ ಇತರೆ ಸದಸ್ಯರು ಸಹ ಕೈ ಜೋಡಿಸಿದ್ದಾರೆ.
ಕಾಮಿಡಿ ಕಲಾವಿದ ಗಿಲ್ಲಿ ನಟ ಅವರು ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ಕಾವ್ಯಾ ಹಿಂದೆ ಬಿದ್ದಿದ್ದಾರೆ. ಈ ವಿಷಯ ಸೀಕ್ರೆಟ್ ಆಗಿ ಉಳಿದಿಲ್ಲ. ಅದನ್ನೇ ಇಟ್ಟುಕೊಂಡು ಭಾನುವಾರದ (ನವೆಂಬರ್ 2) ಸಂಚಿಕೆಯಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಗಿಲ್ಲಿಯ ಕಾಲು ಕಳೆದಿದ್ದಾರೆ. ಅದಕ್ಕೆ ಬಿಗ್ ಬಾಸ್ ಮನೆಯ ಇತರೆ ಸದಸ್ಯರು ಕೂಡ ಕೈ ಜೋಡಿಸಿದ್ದಾರೆ. ಕಳೆದ ವಾರ ಸೂರಜ್ ಮತ್ತು ಕಾವ್ಯ ಅವರು ಡ್ಯಾನ್ಸ್ ಮಾಡಿದಾಗ ಗಿಲ್ಲಿಗೆ ಸಂಕಟ ಆಗಿತ್ತು. ಆ ವಿಚಾರವನ್ನು ಕಿಚ್ಚ ಸುದೀಪ್ ಅವರು ಪ್ರಸ್ತಾಪಿಸಿದ್ದಾರೆ. ‘ಗಿಲ್ಲಿಗೆ ಹೊಟ್ಟೆ ಉರಿಯೋದು ನೋಡಿ ನನಗೆ ಖುಷಿ ಆಗುತ್ತಿತ್ತು’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ‘ಇವರು ಯಾಕೆ ನನ್ನ ಹಿಂದೆ ಬಿದ್ದಿದ್ದಾರೆ ಅಂತ ಗೊತ್ತಾಗುತ್ತಿಲ್ಲ. ದಯವಿಟ್ಟು ನನ್ನ ಅರ್ಥ ಮಾಡಿಕೊಳ್ಳಿ. ನಾನು ಈಗಾಗಲೇ ಕಮಿಟೆಡ್’ ಎಂದು ಗಿಲ್ಲಿ ನಟ (Gilli Nata) ಹೇಳಿದ್ದಾರೆ. ‘ಕಲರ್ಸ್ ಕನ್ನಡ’ ಹಂಚಿಕೊಂಡ ಪ್ರೋಮೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 02, 2025 10:56 AM
