‘37 ಕೋಟಿ ವೋಟ್ ಅವನಿಗೆ ಬಿದ್ದಿದೆ’; ಹನುಮಂತನ ಪ್ರಕಾರವೂ ಗಿಲ್ಲಿನೇ ವಿನ್ನರ್ 

Updated on: Jan 18, 2026 | 3:24 PM

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿಗೆ 37 ಕೋಟಿ ವೋಟ್ ಬಿದ್ದಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ವಿಷಯವನ್ನು ಹನುಮಂತ ಕೂಡ ಒಪ್ಪಿಕೊಂಡರು. ಈ ಮಾತು ನಿಜವಾಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅಭಿಮಾನಿಗಳಗೆ ಈ ವಿಷಯ ಖುಷಿ ಕೊಡುವ ರೀತಿಯಲ್ಲಿ ಇದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ರೇಸ್​​ನಲ್ಲಿ ಮುಂಚೂಣಿಯಲ್ಲಿರುವ ಸ್ಪರ್ಧಿಗೆ 37 ಕೋಟಿ ವೋಟ್ ಬಿದ್ದಿದೆ ಎಂದು ಸುದೀಪ್ ಘೋಷಣೆ ಮಾಡಿದ್ದರು. ಈ ಮತ ಗಿಲ್ಲಿ ನಟನಿಗೆ ಬಿದ್ದಿದೆ ಎಂಬುದು ಅನೇಕರ ಊಹೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಹನುಮಂತ ಕೂಡ ಇದೇ ರೀತಿಯ ಊಹೆ ಮಾಡಿದ್ದಾರೆ. ‘ಗಿಲ್ಲಿನೇ ಗೆಲ್ಲೋದು. ಅವನಿಗೆ 37 ಕೋಟಿ ವೋಟ್ ಬಂದಿರುತ್ತದೆ’ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.