ಈ ಬಾರಿ ಬಿಗ್ ಬಾಸ್ ಗೆಲ್ಲೋದು ಯಾರು ಎಂದು ಹೇಳಿದ ರಿಷಾ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ. ಇದಕ್ಕೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಆದರೆ, ಬಹುತೇಕರು ಗಿಲ್ಲಿ ಹೆಸರು ತೆಗೆದುಕೊಳ್ಳುತ್ತಿದ್ದಾರೆ. ರಿಷಾ ಪ್ರಕಾರವೂ ಗಿಲ್ಲಿಯೇ ಗೆಲ್ಲಬೇಕು ಎಂಬುದು ಅವರ ಆಸೆ. ಆ ಬಗ್ಗೆ ಇಲ್ಲಿ ಇದೆ ವಿವರ.
ರಿಷಾ ಅವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ದಿನ ಇರೋ ಕನಸು ಕಂಡಿದ್ದರು. ಆದರೆ, ಇದಕ್ಕೆ ಅವಕಾಶ ಸಿಗಲಿಲ್ಲ. ಅವರ ಪ್ರಕಾರ ಗಿಲ್ಲಿ ಗೆಲ್ಲಬೇಕಂತೆ. ಮನೆ ಒಳಗೆ ಗಿಲ್ಲಿಯೇ ಗೆಲ್ಲುತ್ತಾರೆ ಎಂದು ಅವರಿಗೆ ಹಲವು ಬಾರಿ ಅನಿಸಿದೆ. ಹೊರಗೂ ಕೂಡ ಇದೇ ಅಭಿಪ್ರಾಯ ಅವರಲ್ಲಿ ಇದೆ. ಟಾಪ್ ಐದರಲ್ಲಿ ಗಿಲ್ಲಿ, ರಕ್ಷಿತಾ, ಅಶ್ವಿನಿ, ರಘು, ಧನುಷ್ ಇರಬೇಕು ಎಂಬುದು ಅವರ ಆಸೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 24, 2025 01:58 PM

