ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

Updated on: Dec 14, 2025 | 4:46 PM

ಮೊನ್ನೆ ಅಷ್ಟೇ ರಾಯಚೂರಿನಲ್ಲಿ ಯುವತಿಯೋರ್ವಳು, ಪ್ರಿಯಕರನ ಮದುಗೆಗೆ ನುಗ್ಗಿ ಮದ್ವೆಯನ್ನೇ ತಡೆಯುವಲ್ಲಿ ಯಶಸ್ವಿಯಾಗಿದ್ದಳು.  ಹುಡುಗ ತಾಳಿ ಕಟ್ಟುವ ಮುನ್ನವೇ ಸ್ಥಳಕ್ಕೆ ಬಂದು ಮದುವೆ ನಿಲ್ಲಿಸಿದ್ದಳು. ಇದೇ ಮಾದರಿಯ ಮತ್ತೊಂದು ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆದ್ರೆ, ಪ್ರೇಯಿಸಿ ಮಂಟಪ್ಪಕ್ಕೆ ಬರುವಷ್ಟರಲ್ಲೇ ಪ್ರಿಯಕರ ಮತ್ತೋರ್ವ ಯುವತಿಯ ಕುತ್ತಿಗೆ ತಾಳಿ ಕಟ್ಟಿದ್ದ.

ಚಿಕ್ಕಮಗಳೂರು, (ಡಿಸೆಂಬರ್ 14): ಮೊನ್ನೆ ಅಷ್ಟೇ ರಾಯಚೂರಿನಲ್ಲಿ ಯುವತಿಯೋರ್ವಳು, ಪ್ರಿಯಕರನ ಮದುಗೆಗೆ ನುಗ್ಗಿ ಮದ್ವೆಯನ್ನೇ ತಡೆಯುವಲ್ಲಿ ಯಶಸ್ವಿಯಾಗಿದ್ದಳು.  ಹುಡುಗ ತಾಳಿ ಕಟ್ಟುವ ಮುನ್ನವೇ ಸ್ಥಳಕ್ಕೆ ಬಂದು ಮದುವೆ ನಿಲ್ಲಿಸಿದ್ದಳು. ಇದೇ ಮಾದರಿಯ ಮತ್ತೊಂದು ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆದ್ರೆ, ಪ್ರೇಯಿಸಿ ಮಂಟಪ್ಪಕ್ಕೆ ಬರುವಷ್ಟರಲ್ಲೇ ಪ್ರಿಯಕರ ಮತ್ತೋರ್ವ ಯುವತಿಯ ಕುತ್ತಿಗೆ ತಾಳಿ ಕಟ್ಟಿದ್ದ. ಹೌದು..ತಾಳಿ ಕಟ್ಟಿದ ಕೆಲವೇ ನಿಮಿಷದಲ್ಲಿ ಯುವತಿಯೊಬ್ಬಳು ಕಲ್ಯಾಣ ಮಂಟಪಕ್ಕೆ ನುಗ್ಗಿ ರಂಪಾಟ ಮಾಡಿದ್ದಾಳೆ. ಚಿಕ್ಕಮಗಳೂರು ನಗರದ ದೊಡ್ಡೇಗೌಡ ಕನ್ವೆನ್ಷನ್‌ ಹಾಲ್​ನಲ್ಲಿಗೆ ಬಂದ ಪ್ರೇಯಿಸಿ, ಪ್ರೀತಿಸಿ ಮೋಸ ಮಾಡಿ ಈಗ ಮತ್ತೊಂದು ಹುಡುಗಿ ಜತೆ ಮದುವೆಯಾಗುತ್ತಿದ್ದಿಯಾ ಎಂದು ರಣಚಂಡಿ ಅವತಾರ ತಾಳಿದ್ದಾಳೆ. ಇದರಿಂದ ಮದುವೆಗೆ ಆಗಮಿಸಿದ್ದ ಸಂಬಂಧಿಕರೆಲ್ಲ ಬಿಗ್ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಇನ್ನೇನು ತಾಳಿ ಕಟ್ಟುವ ವೇಳೆಯಲ್ಲೇ ಮಂಟಪ್ಪಕ್ಕೆ ಪ್ರೇಯಸಿ ಎಂಟ್ರಿ:ಕಕ್ಕಾಬಿಕ್ಕಿಯಾದ ಪ್ರಿಯಕರ