Video: ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ, ಆ ರಾತ್ರಿ ನಡೆದಿದ್ದೇನು?
ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಮಹಿಳೆ ಅಕ್ಷರಶಃ ಭಯಭೀತರಾಗಿದ್ದರು. ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ್ದರು. ಆಗ ರಾತ್ರಿ ಹತ್ತು ಗಂಟೆಯಾಗಿತ್ತು, ಎಲ್ಲಿಗೆ ಹೋಗುವುದು, ಏನು ಮಾಡುವುದು ಎಂದು ಅರಿಯದೆ ನಿಂತಲ್ಲೇ ನಿಂತಿದ್ದರು. ಆಗ ಸಹಾಯಕ್ಕೆ ಬಂದಿದ್ದೇ ರ್ಯಾಪಿಡೊ ಚಾಲಕಿ ಸಿಂಧು ಕುಮಾರಿ. ಅವರು ತಮ್ಮ ವಾಹನವನ್ನು ನಿಲ್ಲಿಸಿ ಆ ಮಹಿಳೆಗೆ ಧೈರ್ಯ ತುಂಬಿ, ಸುರಕ್ಷಿತವಾಗಿ ಹೋಟೆಲ್ ಕೊಕೊನಟ್ಗೆ ಇಳಿಸಿ, ಅವರ ಭಯವನ್ನು ನಗುವಾಗಿ ಪರಿವರ್ತಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.
ಗೋವಾ, ಜನವರಿ 13: ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಮಹಿಳೆ ಅಕ್ಷರಶಃ ಭಯಭೀತರಾಗಿದ್ದರು. ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ್ದರು. ಆಗ ರಾತ್ರಿ ಹತ್ತು ಗಂಟೆಯಾಗಿತ್ತು, ಎಲ್ಲಿಗೆ ಹೋಗುವುದು, ಏನು ಮಾಡುವುದು ಎಂದು ಅರಿಯದೆ ನಿಂತಲ್ಲೇ ನಿಂತಿದ್ದರು. ಆಗ ಸಹಾಯಕ್ಕೆ ಬಂದಿದ್ದೇ ರ್ಯಾಪಿಡೊ ಚಾಲಕಿ ಸಿಂಧು ಕುಮಾರಿ. ಅವರು ತಮ್ಮ ವಾಹನವನ್ನು ನಿಲ್ಲಿಸಿ ಆ ಮಹಿಳೆಗೆ ಧೈರ್ಯ ತುಂಬಿ, ಸುರಕ್ಷಿತವಾಗಿ ಹೋಟೆಲ್ ಕೊಕೊನಟ್ಗೆ ಇಳಿಸಿ, ಅವರ ಭಯವನ್ನು ನಗುವಾಗಿ ಪರಿವರ್ತಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ವಿದೇಶಿ ಮಹಿಳೆ ಕೂಡಾ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 13, 2026 09:58 AM