ದುರ್ಗಾಮಾತೆ ಪರಮಭಕ್ತ ಪ್ರಧಾನಿ ಮೋದಿ ನಾಲ್ಕು ದಶಕಗಳಿಂದ ನವರಾತ್ರಿ ಉಪವಾಸ ವ್ರತ ಅಚರಿಸಿಕೊಂಡು ಬಂದಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 17, 2021 | 6:30 PM

ಪ್ರಧಾನ ಮಂತ್ರಿಗಳ ಉಪವಾಸ ವ್ರತ ಮಹಾಲಯ ಅಮವಾಸ್ಯೆಯಂದು ಆರಂಭಗೊಂಡು ವಿಜಯದಶಮಿ ದಿನದಂದು ಪೂರ್ಣಗೊಳ್ಳುತ್ತದೆ. ವಿಜಯದಶಮಿ ಹಬ್ಬದ ಸಾಯಂಕಾಲ ದುರ್ಗಾ ಮಾತೆಗೆ ಪೂಜೆ ಸಲ್ಲಿಸಿದ ಬಳಿಕ ಆಹಾರ ಸೇವಿಸುತ್ತಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೈವಭಕ್ತರು. ದುರ್ಗಾ ಮಾತೆಯ ಅತ್ಯಂತ ನಿಷ್ಠಾವಂತ ಭಕ್ತರಾಗಿರುವ ಅವರು ಪ್ರತಿ ವರ್ಷ ನವರಾತ್ರಿಯ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ 9 ದಿನಗಳ ಕಾಲ ಉಪವಾಸ ವ್ರತವನ್ನು ಆಚರಿಸುತ್ತಾರೆ. ಅವರು ಭಾರತದಲ್ಲಿರಲಿ ಅಥವಾ ವಿದೇಶ ಪ್ರವಾಸದಲ್ಲಿ, ವ್ರತವನ್ನು ಮಾತ್ರ ಯಾವ ಕಾರಣಕ್ಕೂ ತಪ್ಪಿಸಲಾರರು. ಈ ಒಂಭತ್ತು ದಿನಗಳಲ್ಲಿ ದುರ್ಗೆಗೆ ಪೂಜೆ ಸಲ್ಲಿಸುವಾಗ ಅವರು ನೀರು ಇಲ್ಲವೇ ನಿಂಬೆಹಣ್ಣಿನ ಪಾನಕ ಬಿಟ್ಟರೆ ಮತ್ತೇನೂ ಸೇವಿಸುವುದಿಲ್ಲ. ಹೌದು ಅಷ್ಟು ದಿನಗಳ ಕಾಲ ಅವರದ್ದು ಕೇವಲ ನೀರಾಹಾರ.

ಅಂದಹಾಗೆ, ಪ್ರಧಾನಿ ಮೋದಿ ಅವರು ನವರಾತ್ರಿ ಉಪವಾಸ ವ್ರತವನ್ನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಇಲ್ಲವೇ ಭಾರತದ ಪ್ರಧಾನ ಮಂತ್ರಿ ಆದ ಬಳಿಕ ಆರಂಭಿಸಿದ್ದಲ್ಲ. ಸುಮಾರು ನಾಲ್ಕೂವರೆ ದಶಕಗಳಿಂದ ಅವರು ವ್ರತವನ್ನು ಆಚರಿಸಿಕೊಂಡು ಬಂದಿದ್ದಾರೆ ಮತ್ತು ಮುಂದೆಯೂ ಆಚರಿಸಲಿದ್ದಾರೆ. ವ್ರತದ ಹಿನ್ನೆಲೆಯಲ್ಲಿ ಅವರ ಕಾರ್ಯವೈಖರಿ, ಕಾರ್ಯವಿಧಾನ ಅಥವಾ ದಿನಚರಿ ಬದಲಾಗುವುದಿಲ್ಲ. ಮಾಮೂಲಿನಂತೆ ಎಲ್ಲ ಕೆಲಸಗಳನ್ನು ಮಾಡಿಕೊಂಡೇ ಅವರು ಉಪವಾಸ ವ್ರತ ಆಚರಿಸುತ್ತಾರೆ.

ಪ್ರಧಾನ ಮಂತ್ರಿಗಳ ಉಪವಾಸ ವ್ರತ ಮಹಾಲಯ ಅಮವಾಸ್ಯೆಯಂದು ಆರಂಭಗೊಂಡು ವಿಜಯದಶಮಿ ದಿನದಂದು ಪೂರ್ಣಗೊಳ್ಳುತ್ತದೆ. ವಿಜಯದಶಮಿ ಹಬ್ಬದ ಸಾಯಂಕಾಲ ದುರ್ಗಾ ಮಾತೆಗೆ ಪೂಜೆ ಸಲ್ಲಿಸಿದ ಬಳಿಕ ಆಹಾರ ಸೇವಿಸುತ್ತಾರೆ.

ನವರಾತ್ರಿ ಉಪವಾಸ ವ್ರತ ಆರಂಭದ ದಿನ ಪ್ರಧಾನಿ ಮೋದಿ ಅವರು ಶೈಲಪುತ್ರಿ ದೇವತೆಗೂ ಪೂಜೆ ಸಲ್ಲಿಸುತ್ತಾರೆ. ಕೆಲ ವರ್ಷಗಳ ಹಿಂದೆ ಅವರು ಶೈಲಪುತ್ರಿ ಮಾತೆಗೆ ಆರಾಧನೆ ಸಲ್ಲಿಸುವ ವಿಡಿಯೋ ಲಿಂಕ್ ಒಂದನ್ನು ಟ್ವೀಟ್ ಮೂಲಕ ಶೇರ್ ಮಾಡಿ, ‘ನವರಾತ್ರಿಯ ಮೊದಲ ದಿನ ನಾವು ಮಾ ಶೈಲಪುತ್ರಿಗೆ ಆರಾಧನೆ ಸಲ್ಲಿಸುತ್ತೇವೆ. ಮಾತೆಗೆ ಸಮರ್ಪಿಸಲಾಗುವ ಸ್ತುತಿ ಗೀತೆಯ ಲಿಂಕ್ ಹಾಕಿದ್ದೇನೆ,’ ಅಂತ ಹೇಳಿದ್ದರು.

ಇದನ್ನೂ ಓದಿ: ರೈಲಿನಲ್ಲಿ ಡೋಲಕ್ ನುಡಿಸುತ್ತಾ ಪ್ರಯಾಣಿಕರನ್ನು ರಂಜಿಸಿದ ಪುಟ್ಟ ಬಾಲಕ; ನೆಟ್ಟಿಗರು ಮೆಚ್ಚಿದ ವಿಡಿಯೋವಿದು