Mountaineering: ಕನ್ನಡಿಗ ಟ್ರೆಕ್ಕರ್​​ಗಳ ಸಾಧನೆ, ಹಿಮಾಚಲ ಪ್ರದೇಶದ ದುರ್ಗಮ ಪಿನ್ ಪರ್ವತಿ ಕಣಿವೆಯ ಶಿಖರ ತಲುಪಿದ ಗೋಕರ್ಣ ಯುವಕರು!

Mountaineering: ಕನ್ನಡಿಗ ಟ್ರೆಕ್ಕರ್​​ಗಳ ಸಾಧನೆ, ಹಿಮಾಚಲ ಪ್ರದೇಶದ ದುರ್ಗಮ ಪಿನ್ ಪರ್ವತಿ ಕಣಿವೆಯ ಶಿಖರ ತಲುಪಿದ ಗೋಕರ್ಣ ಯುವಕರು!

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 23, 2023 | 1:49 PM

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೇವಲ 12 ತಂಡಗಳು ಮಾತ್ರ ಈ ಸಾಹಸಯಾತ್ರೆ ಯಶಸ್ವೀಯಾಗಿ ಪೂರೈಸಿವೆ.

ಬೆಂಗಳೂರು: ಹಿಮಾಚಲದ ಪ್ರದೇಶದ ಪರ್ವತ ಪ್ರದೇಶದಲ್ಲಿ ಅತ್ಯಂತ ಎತ್ತರ ಮತ್ತು ದುರ್ಗಮ ಎನಿಸಿರುವ ಪಿನ್ ಪರ್ವತಿ ಕಣಿವೆಯ (Pin Parvati mountain pass) ಶಿಖರ ತಲುಪುವುದು ಟ್ರೆಕ್ಕಿಂಗ್ ಉತ್ಸಾಹಿಗಳಿಗೆ (trekkers) ನಿಸ್ಸಂದೇಹವಾಗಿ ಒಂದು ದೊಡ್ಡ ಸವಾಲು. ಇದರ ಎತ್ತರ 17,450 ಅಡಿಗಳಾಗಿದ್ದು ಚಾರಣ ಯಾಕೆ ಕಠಿಣವೆಂದರೆ, ಇಲ್ಲಿನ ತಾಪಮಾನ ಮೈನಸ್ 10 ಡಿಗ್ರಿಗಳಷ್ಟಿರುತ್ತದೆ. ಆದರೆ ರಾಜ್ಯದ ಗೋಕರ್ಣದವರಾಗಿರುವ (Gokarna) ಮಹೇಶ್ ಹೀರಗಂಗೆ, ಗಣೇಶ್ ಮೂಳೆ, ಕುಮಾರ ಗೋಪಿ, ಶ್ರೀನಿಧಿ ಮೂಳೆ ಮತ್ತು ಧೃವ ಛಾಪಖಂಡ್ ಪಿನ್ ಪರ್ವತಿಯ ಶಿಖರ ತಲುಪಿ ಕನ್ನಡಿಗರಲ್ಲಿ ಹೆಮ್ಮೆ ಮೂಡಿಸಿದ್ದಾರೆ. ಶಿಖರ ತಲುಪಲು 120 ಕಿಮೀ ದೂರವನ್ನು 8 ರಾತ್ರಿ ಮತ್ತು 9 ಹಗಲುಗಲ್ಲಿ ಕ್ರಮಿಸಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೇವಲ 12 ತಂಡಗಳು ಮಾತ್ರ ಈ ಸಾಹಸಯಾತ್ರೆ ಯಶಸ್ವೀಯಾಗಿ ಪೂರೈಸಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 23, 2023 12:50 PM