ಗೋಲ್ಡ್ ಇಟ್ಟಿಲ್ಲ, ಲೋನ್ ಪಡೆದಿಲ್ಲ: ಮತ್ತೊಂದು ಕೆನರಾ ಬ್ಯಾಂಕಿನಿಂದ ಮಹಾ ಮೋಸ

Updated on: Dec 29, 2025 | 5:50 PM

ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನದ ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದ ಪ್ರಕರಣವೊಂದು ಮೈಸೂರಿನ ಕೆನರಾ ಬ್ಯಾಂಕ್‌ನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕ್‌ನ ಅಧಿಕೃತ ಅಕ್ಕಸಾಲಿಗ (Appraiser) ಅಶ್ವಿನ್ ಆಚಾರ್ ಎಂಬುವವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ಮಲ್ಲೇಶ್ವರಂ 15ನೇ ಕ್ರಾಸ್​ನ ಕೆನರಾ ಬ್ಯಾಂಕ್​ನಲ್ಲಿ ಇಂತದ್ದೇ ಘಟನೆ ನಡೆದಿದೆ. ಹೌದು... ಬೆಂಗಳೂರಿನ ಮಲ್ಲೇಶ್ವರಂ 15ನೇ ಕ್ರಾಸ್​ನ ಕೆನರಾ ಬ್ಯಾಂಕ್​ನ ಹಿರಿಯ ವ್ಯವಸ್ಥಾಪಕ ಮ್ಯಾನೇಂಜರ್ ಎನ್.ರಘು ವಿರುದ್ಧ ವಿರುದ್ಧ 41 ಗ್ರಾಹಕರಿಗೆ ಮಕ್ಮಲ್ ಟೋಪಿ ಹಾಕಿ ಒಟ್ಟು 3.11 ಕೋಟಿಗೂ ಹೆಚ್ಚು ಹಣ ವಂಚಿಸಿರುವ ಆರೋಪ ಕೇಳಿಬಂದಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಮೈಸೂರು (ಡಿಸೆಂಬರ್ .29) : ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನದ ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದ ಪ್ರಕರಣವೊಂದು ಮೈಸೂರಿನ ಕೆನರಾ ಬ್ಯಾಂಕ್‌ನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕ್‌ನ ಅಧಿಕೃತ ಅಕ್ಕಸಾಲಿಗ (Appraiser) ಅಶ್ವಿನ್ ಆಚಾರ್ ಎಂಬುವವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ಮಲ್ಲೇಶ್ವರಂ 15ನೇ ಕ್ರಾಸ್​ನ ಕೆನರಾ ಬ್ಯಾಂಕ್​ನಲ್ಲಿ ಇಂತದ್ದೇ ಘಟನೆ ನಡೆದಿದೆ. ಹೌದು… ಬೆಂಗಳೂರಿನ ಮಲ್ಲೇಶ್ವರಂ 15ನೇ ಕ್ರಾಸ್​ನ ಕೆನರಾ ಬ್ಯಾಂಕ್​ನ ಹಿರಿಯ ವ್ಯವಸ್ಥಾಪಕ ಮ್ಯಾನೇಂಜರ್ ಎನ್.ರಘು ವಿರುದ್ಧ ವಿರುದ್ಧ 41 ಗ್ರಾಹಕರಿಗೆ ಮಕ್ಮಲ್ ಟೋಪಿ ಹಾಕಿ ಒಟ್ಟು 3.11 ಕೋಟಿಗೂ ಹೆಚ್ಚು ಹಣ ವಂಚಿಸಿರುವ ಆರೋಪ ಕೇಳಿಬಂದಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಅಗಸ್ಟ್ 4 ರಿಂದ ಡಿ.9ರವರೆಗೆ ನಕಲಿ ಗೋಲ್ಡ್ ಲೋನ್ ಸೃಷ್ಟಿಸಿದ್ದ ರಘು, 41 ಗ್ರಾಹಕರ ಖಾತೆಗಳಲ್ಲಿ ನಕಲಿ ಗೋಲ್ಡ್ ಲೋನ್ ಮಾಡಿ ಹಣ ಪಡೆದು ಲೂಟಿ ಮಾಡಿದ್ದಾರೆ. ಬ್ಯಾಂಕ್​ನ ಗ್ರಾಹಕರಾಗಿರುವ ವೃದ್ಧರು, ಪಿಂಚಣಿದಾರರು, ಆರ್ಚಕರು, ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ನಕಲಿ ಗೋಲ್ಡ್​ ಲೋನ್ ಸೃಷ್ಟಿಸಿದ್ದು, ಇವರ ಖಾತೆಗಳ ಒಟಿಪಿ ಹಾಗೂ ಚೆಕ್ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಮ್ಯಾನೇಜರ್​​ ರಘು ಎಸ್ಕೇಪ್ ಆಗಿದ್ದು, ಇತ್ತ 41 ಖಾತೆಗಳನ್ನ ಬ್ಯಾಂಕ್ ಫ್ರೀಜ್ ಮಾಡಿದ್ದರಿಂದ ಗ್ರಾಹಕರು ಪರದಾಡುವಂತಾಗಿದೆ. ಇನ್ನು ಈ ಬಗ್ಗೆ ಗ್ರಾಹಕರೊಬ್ಬರು ಟಿವಿ9 ಜತೆ ಮಾತನಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.