ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ,ಮತ್ತೆ ಘಟ ಸರ್ಪದ ಆತಂಕ

Edited By:

Updated on: Jan 29, 2026 | 4:01 PM

ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ ಮುಂದುವರೆದಿದ್ದು, ದಿನಕ್ಕೆ ಒಂದಲ್ಲ ಒಂದು ಪ್ರಾಚೀನ ಕಾಲದ ಹಳೇ ವಸ್ತುಗಳು ಪತ್ತೆಯಾಗುತ್ತಲೇ ಇವೆ. ಅಪರೂಪದ ಕಲಾಕೃತಿಗಳು, ಪುಟ್ಟ ಶಿವಲಿಂಗ ಹಾಗೂ ನಾಗಮಣಿಯೊಂದಿಗೆ ಕೆತ್ತಿದ ನಾಗರ ಹಾವಿನ ಹೆಡೆಯ ಶಿಲಾಕೃತಿ ಪತ್ತೆಯಾಗಿದ್ದವು. ಇದೀಗ ಇಂದು (ಜನವರಿ 29) ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ 12ನೇ ದಿನ ಉತ್ಖನನ ಕಾರ್ಯದಲ್ಲಿ ಮತ್ತೊಂದು ‌ ಮೂರು ಹೆಡೆಯ ಘಟ ಸರ್ಪ ಶಿಲೆ ಪತ್ತೆಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.

ಗದಗ, (ಜನವರಿ 29): ಐತಿಹಾಸಿಕ ಲಕ್ಕುಂಡಿಯಲ್ಲಿ (Lakkundi) ಉತ್ಖನನ ಮುಂದುವರೆದಿದ್ದು, ದಿನಕ್ಕೆ ಒಂದಲ್ಲ ಒಂದು ಪ್ರಾಚೀನ ಕಾಲದ ಹಳೇ ವಸ್ತುಗಳು ಪತ್ತೆಯಾಗುತ್ತಲೇ ಇವೆ. ಅಪರೂಪದ ಕಲಾಕೃತಿಗಳು, ಪುಟ್ಟ ಶಿವಲಿಂಗ ಹಾಗೂ ನಾಗಮಣಿಯೊಂದಿಗೆ ಕೆತ್ತಿದ ನಾಗರ ಹಾವಿನ ಹೆಡೆಯ ಶಿಲಾಕೃತಿ ಪತ್ತೆಯಾಗಿದ್ದವು. ಇದೀಗ ಇಂದು (ಜನವರಿ 29) ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ 12ನೇ ದಿನ ಉತ್ಖನನ ಕಾರ್ಯದಲ್ಲಿ ಮತ್ತೊಂದು ‌ ಮೂರು ಹೆಡೆಯ ಘಟ ಸರ್ಪ ಶಿಲೆ ಪತ್ತೆಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಹೀಗೆ ಮೇಲಿಮದ ಮೇಲೆ ಘಟ ಸರ್ಪದ ಶಿಲೆಗಳು ಸಿಗುತ್ತಿರುವುದರಿಂದ ಸಂಪತ್ಭರಿತ ಲಕ್ಕುಂಡಿ ಸಿರಿ ಸಂಪತ್ತನ್ನು ಘಟ ಸರ್ಪಗಳು ಕಾಯುತ್ತಿವೆಯಾ ಎನ್ನುವ ಚರ್ಚೆಗಳು ಶುರುವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ