‘ದಯವಿಟ್ಟು ನನ್ನ ಬಾಸ್ ಎಂದು ಕರೆಯಬೇಡಿ’; ಅಭಿಮಾನಿಗಳ ಬಳಿ ಗಣೇಶ್ ಮನವಿ

|

Updated on: Aug 18, 2024 | 11:11 AM

ಸುದೀಪ್, ಯಶ್ ಅಭಿಮಾನಿಗಳು ಕೂಡ ಬಾಸ್ ಪದ ನಮ್ಮ ಹೀರೋಗೆ ಹೊಂದಿಕೆ ಆಗುತ್ತದೆ ಎಂದು ಹೇಳುತ್ತಾರೆ. ಅದೇ ರೀತಿ ಗಣೇಶ್ ಫ್ಯಾನ್ಸ್ ಅವರನ್ನು ಥಿಯೇಟರ್ ಮುಂದೆ ‘ಜಿ ಬಾಸ್’ ಎಂದು ಕರೆದಿದ್ದರು. ‘ಕೃಷ್ಣಂ ಪ್ರಣಯ ಸಖಿ’ ಗೆದ್ದ ಖುಷಿಯಲ್ಲಿ ಈ ರೀತಿ ಕರೆಯುತ್ತಿದ್ದರು. ಇದಕ್ಕೆ ಗಣೇಶ್ ಬೇಸರ ಹೊಹಾಕಿದ್ದಾರೆ.

ಬಾಸ್ ಪದ ಬಳಕೆ ಇತ್ತೀಚೆಗೆ ಹೆಚ್ಚಿದೆ. ನೆಚ್ಚಿನ ಹೀರೋಗೆ ಅಭಿಮಾನಿಗಳು ಬಾಸ್ ಎಂದು ಕರೆಯುತ್ತಾರೆ. ​ ‘ಬಾಸ್’ ಎಂದರೆ ಅದು ದರ್ಶನ್ ಎಂದು ಅವರ ಫ್ಯಾನ್ಸ್ ಹೇಳುತ್ತಾರೆ. ಸುದೀಪ್, ಯಶ್ ಅಭಿಮಾನಿಗಳು ಕೂಡ ಬಾಸ್ ಪದ ನಮ್ಮ ಹೀರೋಗೆ ಹೊಂದಿಕೆ ಆಗುತ್ತದೆ ಎಂದು ಹೇಳುತ್ತಾರೆ. ಅದೇ ರೀತಿ ಗಣೇಶ್ ಫ್ಯಾನ್ಸ್ ಅವರನ್ನು ಥಿಯೇಟರ್ ಮುಂದೆ ‘ಜಿ ಬಾಸ್’ ಎಂದು ಕರೆದಿದ್ದರು. ‘ಕೃಷ್ಣಂ ಪ್ರಣಯ ಸಖಿ’ ಗೆದ್ದ ಖುಷಿಯಲ್ಲಿ ಈ ರೀತಿ ಕರೆಯುತ್ತಿದ್ದರು. ಇದಕ್ಕೆ ಗಣೇಶ್ ಬೇಸರ ಹೊಹಾಕಿದ್ದಾರೆ. ‘ನನ್ನನ್ನು ಫ್ಯಾನ್ಸ್ ಜಿ ಬಾಸ್ ಎನ್ನುತ್ತಿದ್ದರು. ದಯವಿಟ್ಟು ಹಾಗೆ ಕರೆಯಬೇಡಿ. ನಾನು ನಿಮ್ಮ ಮನೆಯ ಹುಡುಗ. ನನಗೆ ಗೋಲ್ಡನ್ ಸ್ಟಾರ್ ಎಂದು ಇಟ್ಟಿದ್ದೀರಿ. ಹಾಗೆಯೇ ಕರೆಯಿರಿ ಸಾಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 18, 2024 10:56 AM