ತುಂಗಭದ್ರಾ ಡ್ಯಾಂ ಗೇಟ್ ಅಳವಡಿಕೆ: ಕಾರ್ಮಿಕರ ಸಾಹಸಮಯ ಕೆಲಸದ ವಿಡಿಯೋ ವೈರಲ್
ತುಂಡಾಗಿ ನೀರು ಪಾಲಾಗಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ 19ಕ್ಕೆ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಸಾಹಸ ಕಾರ್ಯ ಯಶಸ್ವಿಯಾಗಿದೆ. ಈ ಸ್ಟಾಪ್ ಲಾಗ್ ಗೇಟ್ ಅಳವಡಿಕೆಗೆ ಶ್ರಮಿಸಿದ ಕಾರ್ಮಿಕರ ಸಾಹಸ ಕೆಲಸದ ವಿಡಯೋ ವೈರಲ್ ಆಗಿದೆ. ಕಾರ್ಮಿಕರ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕೊಪ್ಪಳ, ಆಗಸ್ಟ್ 18: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ಗೇಟ್ ತುಂಡಾಗಿ ನೀರುಪಾಲಾಗಿತ್ತು. ಕೂಡಲೇ ಎಚ್ಚೆತ್ತ ಸರ್ಕಾರ, ಹೊಸ ಸ್ಟಾಪ್ ಲಾಗ್ ಗೇಟ್ (Stop Log Gate) ಅಳವಡಿಸಲು ಸೂಚಿಸಿತ್ತು. ಅದರಂತೆ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ನೂರಾರು ಸಿಬ್ಬಂದಿ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮಿಸಿ ಗೇಟ್ ಅವಳಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಹರಿಯುವ ನೀರನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಮಿಕ ಜೀವ ಪಣಕ್ಕಿಟ್ಟು ಜೋತಾಡುತ್ತ ಜಲಾಶಯದ ಗೇಟ್ ಅಳವಡಿಸುವ ದೃಶ್ಯ ಮೈ ಜುಮ್ಮೇನಿಸುತ್ತದೆ. ಹಗ್ಗದ ಮೂಲಕ ಹರಿಯುವ ನೀರಲ್ಲಿ ಇಳಿದು ತಜ್ಞರ ಸಲಹೆ ಅಂತೆ ಕಾರ್ಮಿಕರು ಗೇಟ್ ಅಳವಡಿಸಿದ್ದಾರೆ.
ಕನ್ನಯ್ಯನಾಯ್ಡುಗೆ ಧನ್ಯವಾದ ಹೇಳಿದ ಡಿ.ಕೆ.ಶಿವಕುಮಾರ್
ಹರಿಯುವ ನೀರನ್ನು ನಿಲ್ಲಿಸುವಲ್ಲಿ ಸಿಬ್ಬಂದಿಗಳು ಸಫಲರಾಗಿದ್ದು, ಈ ಹಿನ್ನೆಲೆಯಲ್ಲಿ ಕ್ರಸ್ಟಗೇಟ್ ತಜ್ಞ ಕನ್ನಯ್ಯನಾಯ್ಡು ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ‘ ಧನ್ಯವಾದ ಹೇಳಿದ್ದಾರೆ. ಈ ಗೇಟ್ ದುರಸ್ತಿ ಕೆಲಸ ನಿರ್ವಹಿಸುವಲ್ಲಿ ಕನ್ನಯ್ಯ ನಾಯ್ಡು ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಕೈ ಮುಖಂಡ ಶ್ರೀನಿವಾಸ ರೆಡ್ಡಿ ಮೊಬೈಲ್ಗೆ ಕರೆ ಮಾಡಿ ಮಾತನಾಡಿದರು.
ಇದನ್ನೂ ಓದಿ: ಕಳೆದ ಹತ್ತು ವರ್ಷದಲ್ಲಿ ಕನಿಷ್ಟ ಮಟ್ಟಕ್ಕಿಳಿದ ತುಂಗಭದ್ರಾ ಜಲಾಶಯ ನೀರಿನ ಪ್ರಮಾಣ
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ