ಮೈಸೂರು ಜಿಲ್ಲೆಯಾದ್ಯಂತ ಉತ್ತಮ ಮಳೆ: ಕೆರೆಯಲ್ಲಿ ಆನೆಗಳ ಜಲಕ್ರೀಡೆ
ಮೈಸೂರಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿದೆ. ಹೀಗಾಗಿ ಮಳೆ ಹನಿಗಳ ನಡುವೆ ಕೆರೆಯಲ್ಲಿ ಆನೆಗಳು ಜಲಕ್ರೀಡೆ ಆಡಿದ್ದು, ನಾಗರಹೊಳೆ ವನ್ಯ ಜೀವಿಗಳಿಗೆ ವರುಣ ಖುಷಿ ತಂದಿದ್ದಾನೆ. ಕುಟ್ಟ ಬಳಿ ಕೆರೆಯಲ್ಲಿ ಮರಿಯೊಂದಿಗೆ ತಾಯಿ ಆನೆ ಆಟವಾಡುತ್ತಿರುವ ವಿಡಿಯೋವನ್ನು ವನ್ಯಜೀವಿ ಛಾಯಾಗ್ರಾಹಕ ಎಂ.ಎಂ ರವಿಶಂಕರ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಮೈಸೂರು, ಮೇ 16: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹಲವೆಡೆ ಕಳೆದ ಕೆಲ ದಿನಗಳಿಂದ ಮಳೆರಾಯ (Rain) ಅಬ್ಬರಿಸುತ್ತಿದ್ದಾನೆ. ಅದೇ ರೀತಿಯಾಗಿ ಮೈಸೂರಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿದೆ. ಹೀಗಾಗಿ ಕೆರೆಗಳು ತುಂಬಿವೆ. ಬಿಸಿಲ ಬೇಗೆಯಿಂದ ಬಳಲಿದ್ದ ಪ್ರಾಣಿಗಳು ಸ್ವಲ್ಪ ಸುಧಾರಿಸಿಕೊಳ್ಳುತ್ತಿವೆ. ಅದರಲ್ಲೂ ಕೆರೆಯಲ್ಲಿ ಆನೆಗಳು (elephants) ಮಾತ್ರ ಬಿಂದಾಸ್ ಆಟವಾಡಿವೆ. ಮಳೆ ಹನಿಗಳ ನಡುವೆ ಕೆರೆಯಲ್ಲಿ ಆನೆಗಳು ಜಲಕ್ರೀಡೆ ಆಡಿದ್ದು, ಆ ಮೂಲಕ ನಾಗರಹೊಳೆ ವನ್ಯ ಜೀವಿಗಳಿಗೆ ವರುಣ ಖುಷಿ ತಂದಿದ್ದಾನೆ. ಕುಟ್ಟ ಬಳಿ ಕೆರೆಯಲ್ಲಿ ಮರಿಯೊಂದಿಗೆ ತಾಯಿ ಆನೆ ಆಟವಾಡುತ್ತಿರುವ ವಿಡಿಯೋವನ್ನು ವನ್ಯಜೀವಿ ಛಾಯಾಗ್ರಾಹಕ ಎಂ.ಎಂ ರವಿಶಂಕರ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: May 16, 2024 08:55 AM