ದುಷ್ಟರ ಕುಕೃತ್ಯದಿಂದ ಒಂದಿಡೀ ರಾತ್ರಿಯನ್ನು ಪಾಳುಬಾವಿಯಲ್ಲಿ ಕಳೆದ ನಾಯಿಯನ್ನು ಬೆಳಗ್ಗೆ ಯುವಕರು ರಕ್ಷಿಸಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 07, 2022 | 7:25 PM

ಅದರ ಆರ್ತನಾದವನ್ನು ಮಂಗಳವಾರ ಬೆಳಗ್ಗೆ ಕೇಳಿಸಿಕೊಂಡ ಕೆಲ ಯುವಕರು ಬಹಳ ಉಪಾಯದಿಂದ ಅದನ್ನು ಮೇಲಕ್ಕೆ ತಂದು ರಕ್ಷಿಸಿ ಅನ್ನ-ನೀರು ಒದಗಿಸಿದ್ದಾರೆ.

Tumakuru: ಇದು ದುಷ್ಟತನದ ಪರಮಾವಧಿ. ಸೋಮವಾರದಂದು ತುಮಕೂರು (Tumakuru) ಗುಬ್ಬಿ ಜಿಲ್ಲೆಯ ಜವರೇಗೌಡನ ಪಾಳ್ಯದಲ್ಲಿ (Javaregowdana Palya) ಕೆಲ ದುಷ್ಟರು ತೋಟವೊಂದರಲ್ಲಿರುವ ಭಾರಿ ಆಳದ ಪಾಳು ಬಾವಿಗೆ ನಾಯಿಯೊಂದನ್ನು (dog) ದೂಡಿ ಪರಾರಿಯಾಗಿದ್ದಾರೆ. ಪಾಪದ ನಾಯಿ ರಾತ್ರಿಯೆಲ್ಲ, ಭಯ, ಆತಂಕ ಹಸಿವು ಮತ್ತು ದಾಹದಿಂದ ಬಳಲಿ ಬೆಂಡಾಗಿದೆ. ಅದರ ಆರ್ತನಾದವನ್ನು ಮಂಗಳವಾರ ಬೆಳಗ್ಗೆ ಕೇಳಿಸಿಕೊಂಡ ಕೆಲ ಯುವಕರು ಬಹಳ ಉಪಾಯದಿಂದ ಅದನ್ನು ಮೇಲಕ್ಕೆ ತಂದು ರಕ್ಷಿಸಿ ಅನ್ನ-ನೀರು ಒದಗಿಸಿದ್ದಾರೆ. ಅವರಲ್ಲಿರುವ ದಯಾಪರತೆ ಮತ್ತು ಮಾನವೀಯತೆಯನ್ನು ಕೊಂಡಾಡಬೇಕು ಮಾರಾಯ್ರೇ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.