Gadag: ಜಿಲ್ಲಾ ಆರೋಗ್ಯಾಧಿಕಾರಿಳಿಗೆ (DHOs) ಸರ್ಕಾರ ಸಂಬಳ ನೀಡುತ್ತಿಲ್ಲವೇ? ಗದಗ ಜಿಲ್ಲಾ ಡಿ ಹೆಚ್ ಒ, ಡಾ ಜಗದೀಶ್ ನುಚ್ಚಿನ್ (Dr Jgadish Nuchchin) ಅವರ ವಿರುದ್ಧ ಕೇಳಿ ಬರುತ್ತಿರುವ ಅರೋಪಗಳನ್ನು ಕೇಳುತ್ತಿದ್ದರೆ ಅಂಥ ಅನುಮಾನ ಹುಟ್ಟುತ್ತದೆ. ಸಾಹೇಬರು ಯಾವುದೇ ನೋಟೀಸ್ ನೀಡದೆ 10 ಗುತ್ತಿಗೆ ನಾಕರರನ್ನು (outsourced employees) ಕೆಲಸದಿಂದ ತೆಗೆದುಹಾಕಿದ್ದಾರೆ. ಕೆಲಸ ಕಳೆದುಕೊಂಡವರು ಹೇಳುವುದೇನೆಂದರೆ, ಅವರನ್ನು ನೌಕರಿಯಲ್ಲಿ ಮುಂದುವರಿಸಬೇಕಾದರೆ 20,000-30,000 ರೂ. ಅವರಿಗೆ ಕೊಡಬೇಕಂತೆ. ಒಂದಿಬ್ಬರು ನೌಕರರು ಕೈಯಲ್ಲಿ ಹಣ ಹಿಡಿದುಕೊಂಡು ಡಿ ಎಚ್ ಒ ಮನೆ ಮುಂದೆ ಒಂದು ಕುಟಕು ಕಾರ್ಯಾಚರಣೆ ನಡೆಸುತ್ತಿರುವುದು ಇಲ್ಲಿ ಕಾಣುತ್ತಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.