ಕಳ್ಳತನವಾದ ಫೋನ್ ಸ್ವಿಚ್ ಆಫ್ ಆದ್ರೂ ಕಂಡುಹಿಡಿಯಬಹುದು: ಹೇಗೆ ಅಂತ ಈ ವಿಡಿಯೋ ನೋಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 04, 2024 | 7:47 PM

ಫೋನ್ ಕಳ್ಳತನ ಪತ್ತೆಹಚ್ಚಲು ವಿವಿಧ ಉಪಾಯ ಬಳಸಿದರೂ, ಕಳ್ಳರು ಮಾತ್ರ ಹೊಸ ಉಪಾಯ ಹುಡುಕುತ್ತಿದ್ದಾರೆ. ಹೀಗಾಗಿ ಸ್ಮಾರ್ಟ್​ಫೋನ್ ಆ್ಯಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿರುವ ಗೂಗಲ್ ಮುಂದಿನ ಅಪ್​ಡೇಟ್​ನಲ್ಲಿ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ. ಅದು ಏನು ಎಂದು ತಿಳಿಯಲು ವಿಡಿಯೋ ನೋಡಿ.

ತಂತ್ರಜ್ಞಾನ ಯುಗದಲ್ಲಿ ನಾವು ಹೆಚ್ಚಾಗಿ ಮೊಬೈಲ್ (Mobile)​ ಮೇಲೆ ಅವಲಂಬಿತರಾಗಿದ್ದಾವೆ. ಮಾತನಾಡುವುದರಿಂದ ಹಿಡಿದು ಹಣ ನೀಡುವವರೆಗೂ ನಾವು ಮೊಬೈಲ್​ ಅನ್ನು ಹೆಚ್ಚಾಗಿ ಬಳಸುತ್ತೇವೆ. ಆದರೆ ನಾವು ಬಳಸುವ ಮೊಬೈಲ್​ ಒಂದು ವೇಳೆ ಕಳೆದು ಹೋದರೆ ಅದರಿಂದಾಗು ದುಃಖ ಹೇಳತಿರದು. ಸ್ಮಾರ್ಟ್​ಫೋನ್ ಬಳಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಫೋನ್ ಕಳ್ಳತನದ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಫೋನ್ ಕಳ್ಳತನದ ದೂರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಹೀಗಾಗಿ ಕಳ್ಳತನದ ಪ್ರಕರಣ ಪೊಲೀಸರಿಗೆ ಸಮಸ್ಯೆಯಾಗಿದೆ. ಫೋನ್ ಕಳ್ಳತನ ಪತ್ತೆಹಚ್ಚಲು ವಿವಿಧ ಉಪಾಯ ಬಳಸಿದರೂ, ಕಳ್ಳರು ಮಾತ್ರ ಹೊಸ ಉಪಾಯ ಹುಡುಕುತ್ತಿದ್ದಾರೆ. ಹೀಗಾಗಿ ಸ್ಮಾರ್ಟ್​ಫೋನ್ ಆ್ಯಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿರುವ ಗೂಗಲ್ ಮುಂದಿನ ಅಪ್​ಡೇಟ್​ನಲ್ಲಿ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.