ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?

Updated on: Jul 27, 2025 | 10:59 AM

ಗೂಗಲ್‌ ಮ್ಯಾಪ್‌.. ಈ ಡಿಜಿಟಲ್‌ ದುನಿಯಾದಲ್ಲಿ ಗೂಗಲ್‌ ಮ್ಯಾಪ್‌ ಬಳಸದವರಿಲ್ಲ. ಹೊಸ ಊರಿಗೆ, ಹೊಸ ಜಾಗಕ್ಕೆ, ರೆಸ್ಟೋರೆಂಟ್‌ ಹುಡುಕಲು, ಅಡ್ರೆಸ್‌ ಹುಡುಕಲು ಹೀಗೆ ಪ್ರತಿಯೊಂದಕ್ಕೂ ಗೂಗಲ್‌ ಮ್ಯಾಪ್‌ ಮೇಲೆ ಡಿಪೆಂಡ್‌ ಆಗಿದ್ದಾರೆ. ಡೆಲಿವರಿ ಹುಡುಗರಿಂದ ಹಿಡಿದು ಪ್ರವಾಸಿಗರವರೆಗೂ ಎಲ್ಲರೂ ಬಳಸುತ್ತಾರೆ. ಆದ್ರೆ, ಈಗ ಇದೇ ಗೂಗಲ್‌ ಮ್ಯಾಪ್‌ ಗಂಡಾಂತರ ಕೂಡ ತಂದೊಡ್ತಿದೆ.

ಮುಂಬೈ, (ಜುಲೈ 27): ಗೂಗಲ್‌ ಮ್ಯಾಪ್‌. ಈ ಡಿಜಿಟಲ್‌ ದುನಿಯಾದಲ್ಲಿ ಗೂಗಲ್‌ ಮ್ಯಾಪ್‌ ಬಳಸದವರಿಲ್ಲ. ಹೊಸ ಊರಿಗೆ, ಹೊಸ ಜಾಗಕ್ಕೆ, ರೆಸ್ಟೋರೆಂಟ್‌ ಹುಡುಕಲು, ಅಡ್ರೆಸ್‌ ಹುಡುಕಲು ಹೀಗೆ ಪ್ರತಿಯೊಂದಕ್ಕೂ ಗೂಗಲ್‌ ಮ್ಯಾಪ್‌ ಮೇಲೆ ಡಿಪೆಂಡ್‌ ಆಗಿದ್ದಾರೆ. ಡೆಲಿವರಿ ಹುಡುಗರಿಂದ ಹಿಡಿದು ಪ್ರವಾಸಿಗರವರೆಗೂ ಎಲ್ಲರೂ ಬಳಸುತ್ತಾರೆ. ಆದ್ರೆ, ಈಗ ಇದೇ ಗೂಗಲ್‌ ಮ್ಯಾಪ್‌ ಗಂಡಾಂತರ ಕೂಡ ತಂದೊಡ್ತಿದೆ.ಹೌದು..ಗೂಗಲ್‌ ಮ್ಯಾಪ್‌ ಅನುಸರಿಸಿ ಕಾರು ಚಾಲನೆ ಮಾಡುತ್ತಿದ್ದ ಮಹಿಳೆ ಜೀವಕ್ಕೆ ಸಂಚಕಾರ ತಂದೊಡ್ಡಿದೆ. ನವಿ ಮುಂಬೈನಲ್ಲಿ ಬೇಲಾಪುರ ಸೇತುವೆ ಮೂಲಕ ಉಲ್ವೆಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗೂಗಲ್‌ ಮ್ಯಾಪ್‌ ತೋರಿಸಿದ ದಾರಿಯಲ್ಲಿ ತಿರುವು ತೆಗೆದುಕೊಂಡ್ರೆ ಕಾರು ಸೇತುವೆಯಿಂದ ಸೀದಾ ನದಿಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್‌ ಮಹಿಳೆ ಜೀವಕ್ಕೆ ಯಾವುದೇ ಅಪಾಯ ಆಗಿಲ್ಲ. ನೀರಿನಲ್ಲಿ ತೇಲುತ್ತಿದ್ದ ಕಾರಿನಿಂದ ಮಹಿಳೆಯನ್ನ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನು ನದಿಗೆ ಬಿದ್ದಿದ್ದ ಕಾರನ್ನು ಕ್ರೇನ್‌ ಮೂಲಕ ಹೊರಗೆಳೆದಿದ್ದಾರೆ.

Published on: Jul 27, 2025 10:54 AM