ಹಿಂದಿನ ಸಿದ್ದರಾಮಯ್ಯನೇ ಬೇರೆ ಈಗಿನ ಸಿದ್ದರಾಮಯ್ಯನೇ ಬೇರೆ, ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿಲ್ಲ: ವಿ ಸೋಮಣ್ಣ
ಸಿದ್ದರಾಮಯ್ಯನವರನ್ನು ತಾನು ಚೆನ್ನಾಗಿ ಬಲ್ಲೆ ಎಂದು ಹೇಳಿದ ಸೋಮಣ್ಣ, ಅವರು ಮತ್ತು ತಾನು ಒಟ್ಟಿಗೆ ಮಂತ್ರಿಗಳಾಗಿ ಕೆಲಸ ಮಾಡಿದ್ದೇವೆ, ಈ ಹಿಂದೆ ಅವರು 5 ವರ್ಷಗಳ ಕಾಲ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅವಧಿಯೂ ತನಗೆ ಚೆನ್ನಾಗಿ ಗೊತ್ತು, ಆದರೆ ಆ ಸಿದ್ದರಾಮಯ್ಯನೇ ಬೇರೆ ಈ ಸಿದ್ದರಾಮಯ್ಯನೇ ಬೇರೆ ಎಂದು ಹೇಳಿದರು.
ಬಾಗಲಕೋಟೆ: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ವಿ ಸೋಮಣ್ಣ ಅವರು ರಾಜ್ಯದ ಸಿದ್ದರಾಮಯ್ಯ ಸರ್ಕಾರವನ್ನು ಗೇಲಿ ಮಾಡಿದರು. ಯಾವ ಸರ್ಕಾರದ ಬಗ್ಗೆ ನೀವು ಮಾತಾಡುತ್ತಿರುವಿರಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಸೋಮಣ್ಣ ಈ ಸರ್ಕಾರಕ್ಕೆ ಕಿವಿ, ಕಣ್ಣು, ಮೂಗು ಯಾವುದು ಇಲ್ಲ, ಕೇವಲ ಅಸ್ಥಿಪಂಜರ ಮಾತ್ರ ಉಳಿದಿದೆ, ಅದು ಸಹ ಯಾವಾಗ ಸುಟ್ಟುಹೋಗುತ್ತೋ ಗೊತ್ತಿಲ್ಲ ಎಂದರು. ಯಾವ ಜನರನ್ನು ಗಮನದಲ್ಲಿಟ್ಟಿಕೊಂಡು ಸಿದ್ದರಾಮಯ್ಯ ಸರ್ಕಾರ ನಡೆಸುತ್ತಿದ್ದಾರೆ? ಅಸಲಿಗೆ ರಾಜ್ಯದಲ್ಲಿ ಸರ್ಕಾರವೇ ಅಧಿಕಾರದಲ್ಲಿಲ್ಲ ಎಂದು ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಟಿ ರವಿ ಕೇಸ್ ಬೆಳೆಸುವುದು ಬೇಡವೆಂದು ಸಿಎಂ, ಗೃಹ ಸಚಿವರು ಹೇಳಿಲ್ವಾ? ವಿ ಸೋಮಣ್ಣ ಹೊಸ ಬಾಂಬ್