ಅಕ್ರಮವಿದ್ದಲ್ಲಿ ಸರ್ಕಾರ ಕ್ರಮ ಜರುಗಿಸಲಿ ಆದರೆ ವಿನಾಕಾರಣ ಗುತ್ತಿಗೆದಾರರನ್ನು ಬಲಿಪಶು ಮಾಡೋದು ಬೇಡ: ಕೆಂಪಣ್ಣ, ಗುತ್ತಿಗೆದಾರರ ಸಂಘದ ಅಧ್ಯಕ್ಷ
ಗುತ್ತಿಗೆದಾರರು ಮಾಡುವ ಕೆಲಸಗಳು ಒಂದು ನಿರಂತರವಾದ ಪ್ರಕ್ರಿಯೆ, ಆ ಸರ್ಕಾರ ಈ ಸರ್ಕಾರ ಅಂತೇನೂ ಇಲ್ಲ, ಮುಂದೆ ಇನ್ನೊಂದು ಸರ್ಕಾರ ಬರುತ್ತೆ, ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ಸಿಕ್ಕ ಬಳಿಕ ಕೆಲಸ ಮಾಡಿರುತ್ತಾರೆ, ಕಾಮಗಾರಿ ಮುಗಿದ ಮೇಲೆ ಇಲ್ಲ ಸಲ್ಲದ ಉಪದ್ವ್ಯಾಪ ತೆಗೆದು ಮಾಡಿದ ಕಾಮಗಾರಿಯ ಹಣ ತಡೆಹಿಡಿಯುವುದು ಸರಿಯಲ್ಲ ಎಂದು ಕೆಂಪಣ್ಣ ಹೇಳಿದರು
ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘದ (state contractors association) ಅಧ್ಯಕ್ಷ ಕೆಂಪಣ್ಣ (Kempanna) ಇಂದು ಗುತ್ತಿಗೆದಾದರ ಸಂಘದ ಕಚೇರಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಸೌಮ್ಯ ಭಾಷೆಯಲ್ಲೇ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರ ಬಿಲ್ ಗಳನ್ನು (bills) ತಡೆಹಿಡಿದಿರುವುದರ ಹಿಂದೆ ಯಾವುದೇ ಲಾಜಿಕ್ ಇಲ್ಲ ಎಂದ ಕೆಂಪಣ್ಣ ದಸರಾ ಹಬ್ಬ ತಲೆ ಮೇಲಿದೆ ಮತ್ತು ಗುತ್ತಿಗೆದಾರರಿಗೆ ಅದು ಬಹು ದೊಡ್ಡ ಹಬ್ಬವಾಗಿರುವುದರಿಂದ ಬೇಗ ಎಲ್ಲ ಗುತ್ತಿಗೆದಾರರ ಬಿಲ್ ಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು. ಗುತ್ತಿಗೆದಾರರು ಮಾಡುವ ಕೆಲಸಗಳು ಒಂದು ನಿರಂತರವಾದ ಪ್ರಕ್ರಿಯೆ, ಆ ಸರ್ಕಾರ ಈ ಸರ್ಕಾರ ಅಂತೇನೂ ಇಲ್ಲ, ಮುಂದೆ ಇನ್ನೊಂದು ಸರ್ಕಾರ ಬರುತ್ತೆ, ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ಸಿಕ್ಕ ಬಳಿಕ ಕೆಲಸ ಮಾಡಿರುತ್ತಾರೆ, ಕಾಮಗಾರಿ ಮುಗಿದ ಮೇಲೆ ಇಲ್ಲ ಸಲ್ಲದ ಉಪದ್ವ್ಯಾಪ ತೆಗೆದು ಮಾಡಿದ ಕಾಮಗಾರಿಯ ಹಣ ತಡೆಹಿಡಿಯುವುದು ಸರಿಯಲ್ಲ ಎಂದು ಕೆಂಪಣ್ಣ ಹೇಳಿದರು. ಬಿಬಿಎಂಪಿಯ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ 3 ವರ್ಷಗಳಿಂದ ಬಿಲ್ ಗಳು ರಿಲೀಸ್ ಆಗಿಲ್ಲ. ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಣ್ಣ ನೀರಾವರಿ ಇಲಾಖೆ 10,000 ಕೋಟಿ ರೂ. ಮೊತ್ತದ ಕಾಮಗಾರಿ ರದ್ದು ಮಾಡಿದ್ದಾರೆ. 3,000 ಕೋಟಿ ಮೌಲ್ಯದ ಯೋಜನೆಗೆ 10,000 ಕೋಟಿ ರೂ. ಗಳ ವರ್ಕ್ ಆರ್ಡರ್ ರಿಲೀಸ್ ಮಾಡಿದ ಕಾರಣ ರದ್ದು ಮಾಡಿದ್ದಾರಂತೆ. ಸರ್ಕಾರ ಕ್ರಮ ತೆಗೆದುಕೊಳ್ಳಲಿ, ತಮ್ಮ ಅಭ್ಯಂತರ ಇಲ್ಲ ಆದರೆ ವಿನಾಕಾರಣ ಗುತ್ತಿಗೆದಾರರನ್ನು ಬಲಿಪಶು ಮಾಡೋದು ಬೇಡ ಎಂದು ಕೆಂಪಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ