ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ಪ್ರಯಾಣಿಕರಿಲ್ಲದ ಸರ್ಕಾರಿ ಬಸ್ಸೊಂದು ಬ್ರೇಕ್ ಫೇಲ್ ಆಗಿ ರಸ್ತೆ ಬದಿಯ ಕಂದಕಕ್ಕೆ ಜಾರಿತು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 02, 2022 | 3:01 PM

ಗೋಕುಲ ರಸ್ತೆಯ ಮೊರಾರ್ಜಿ ರಸ್ತೆಯಲ್ಲಿ ಬಸ್ ಚಲಿಸುತ್ತಿದ್ದ ಸಮಯದಲ್ಲಿ ಬ್ರೇಕ್ ಫೇಲಾಗಿದ್ದರಿಂದ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾನೆ.

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ಸರ್ಕಾರಿ ಸ್ವಾಮ್ಯದ ನಗರ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದರ ಬ್ರೇಕ್ ಫೇಲ್ (break failure) ಆಗಿ ರಸ್ತೆ ಪಕ್ಕದಲ್ಲಿ ಅಷ್ಟೇನೂ ಆಳವಿರದ ಕಂದಕಕ್ಕೆ ಉರುಳಿದ ಘಟನೆ ನಡೆದಿದೆ. ಅದೃಷ್ಟವಶಾತ್ ಬಸ್ ನಲ್ಲಿ ಚಾಲಕನ (driver) ಹೊರತಾಗಿ ಬೇರೆ ಯಾರೂ ಇರಲಿಲ್ಲ. ಚಾಲಕ ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಗೋಕುಲ ರಸ್ತೆಯ (Gokul Road) ಮೊರಾರ್ಜಿ ರಸ್ತೆಯಲ್ಲಿ ಬಸ್ ಚಲಿಸುತ್ತಿದ್ದ ಸಮಯದಲ್ಲಿ ಬ್ರೇಕ್ ಫೇಲಾಗಿದ್ದರಿಂದ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾನೆ. ಹಾಗಾಗಿ ಅದು ತಗ್ಗು ಪ್ರದೇಶಕ್ಕೆ ಜಾರಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ