ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಮಿಣಿಕೆ ಗ್ರಾಮದಲ್ಲಿ ಪಿಜೆಯೊಂದನ್ನು ನಡೆಸುತ್ತಿದ್ದ ವ್ಯಕ್ತಿಯ ಬಳಿ ರೂ. 1.50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂ ಕೆಂಗೇರಿ ಉಪವಿಭಾಗದ ಜೆಇ ಮಲ್ಲೇಶ್ (Mallesh) ಮತ್ತು ಲೈನ್ ಮ್ಯಾನ್ ಬಸವರಾಜು (Basavaraju) ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ರಾಮನಗರ ಲೋಕಾಯುಕ್ತದ ಡಿವೈ ಎಸ್ ಪಿ ಗೌತಮ್ (Gautam DySP) ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಅನುಮತಿಯಿಲ್ಲದೆ ಪಿಜಿ ನಡೆಸುವುದು ಕಾನೂನು ಬಾಹಿರ, ಹಾಗಾಗಿ ರೂ. 2.80 ಲಕ್ಷ ದಂಡ ಕಟ್ಟಬೇಕು ಎಂದು ಹೆದರಿಸಿ ವ್ಯಕ್ತಿಯ ಬಳಿ ರೂ. 1.50 ಲಕ್ಷ ಹಣ ಪೀಕುವ ಪ್ರಯತ್ನದಲ್ಲಿದ್ದಾಗ ಮಲ್ಲೇಶ್ ಮತ್ತು ಬಸವರಾಜು ಸಿಕ್ಕಿಬಿದ್ದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ